ನೆಲ್ಯಾಡಿ ಐ.ಐ.ಸಿ.ಟಿ ವಿದ್ಯಾಸಂಸ್ಥೆಯಿಂದ ತರಬೇತಿ ಪಡೆದ ತನುಷ್ ಜವಾಹರ್ ನವೋದಯಕ್ಕೆ ಆಯ್ಕೆ

0

ನೆಲ್ಯಾಡಿ: ಕಳೆದ 16 ವರ್ಷಗಳಿಂದ ವಿದ್ಯಾಭ್ಯಾಸ ಕ್ಷೇತ್ರದಲ್ಲಿ ಶ್ರೇಷ್ಠ ಸೇವೆ ನೀಡುತ್ತಿರುವ ಐಐಸಿಟಿ ವಿದ್ಯಾಸಂಸ್ಥೆ ಇನ್ನೊಂದು ಹೆಮ್ಮೆಯ ಸಾಧನೆ ಕಂಡಿದೆ. 2025-26ನೇ ಸಾಲಿನ ಜವಾಹರ್ ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು,
ನೆಲ್ಯಾಡಿಯ ಐಐಸಿಟಿ ಸಂಸ್ಥೆಯಲ್ಲಿ ತರಬೇತಿ ಪಡೆದ ಇಬ್ಬರು ವಿದ್ಯಾರ್ಥಿಗಳ ಪೈಕಿ ಓರ್ವ ವಿದ್ಯಾರ್ಥಿ ತನುಷ್ ಆಯ್ಕೆಯಾಗಿದ್ದಾರೆ.

ತನುಷ್ ಶಿಬಾಜೆ ಪೆರ್ಲ ಸರಕಾರಿ ಪ್ರಾಥಮಿಕ ಶಾಲೆಯ 5ನೇ ತರಗತಿಯ ವಿದ್ಯಾರ್ಥಿಯಾಗಿದ್ದು, ಪತ್ತಿ ಮಾರು ನಿವಾಸಿ ಸತೀಶ ಎಂ.ಕೆ. ಹಾಗೂ ಸೀತಾ ಅವರ ಪುತ್ರ.

ಐ.ಐ.ಸಿ.ಟಿ ವಿದ್ಯಾಸಂಸ್ಥೆ ಕಂಪ್ಯೂಟರ್ ತರಬೇತಿ, ನರ್ಸರಿ ಟೀಚರ್ ಟ್ರೈನಿಂಗ್, ಟ್ಯೂಷನ್, ನವೋದಯ ಕೋಚಿಂಗ್, ಅಬಾಕಸ್ ಮತ್ತು ಇತರ ಶೈಕ್ಷಣಿಕ ತರಬೇತಿಗಳನ್ನು ನೀಡುತ್ತಾ, ವಿದ್ಯಾರ್ಥಿಗಳನ್ನು ಶೈಕ್ಷಣಿಕ ಪಥದಲ್ಲಿ ಮುನ್ನಡೆಸುತ್ತಿದೆ.

ನವೋದಯ ಕೋಚಿಂಗ್ ಪ್ರಾರಂಭವಾಗಿದ್ದು, ಆಸಕ್ತ ವಿದ್ಯಾರ್ಥಿಗಳು 9448409912 ನಂಬರಿಗೆ ಸಂಪರ್ಕಿಸಿ ಪ್ರವೇಶ ಪಡೆಯಬಹುದು.

LEAVE A REPLY

Please enter your comment!
Please enter your name here