

ಅಂಡಿಂಜೆ: ಗ್ರಾಮ ಪಂಚಾಯತ್ ಮತ್ತು ನಿಸರ್ಗ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಮಹಿಳಾ ಒಕ್ಕೂಟದ ಸಹಯೋಗದೊಂದಿಗೆ ನಡೆದ ಮಹಿಳಾ ಗ್ರಾಮಸಭೆ ಮತ್ತು ಮಹಿಳಾ ದಿನಾಚರಣೆ ಕಾರ್ಯಕ್ರಮವು ಪಂಚಾಯತ್ ಅಧ್ಯಕ್ಷರ ಉಪಸ್ಥಿತಿಯಲ್ಲಿ ನಡೆಯಿತು.
ಸರೋಜಾ ಇವರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಸಭೆಯಲ್ಲಿ ಸುರೇಖಾ ಸ್ವಾಗತಿಸಿದರು. ಉಷಾ ಕಾಮತ್ ದೀಪ ಬೆಳಗಿಸಿ ಉದ್ಘಾಟಿಸಿದರು.
ಪಂಚಾಯತ್ ಉಪಾಧ್ಯಕ್ಷೆ ಶ್ವೇತಾ, ಒಕ್ಕೂಟದ ಅಧ್ಯಕ್ಷೆ ಆಶಾ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ಪಾಟೀಲ್, ಕಾರ್ಯದರ್ಶಿ ಚಂಪಾ, ದ್ವಿತೀಯ ದರ್ಜೆ ಲೆಕ್ಕ ಸಹಾಯಕಿ ಮಮತಾ, ಪಂಚಾಯತ್ ಸದಸ್ಯರಾದ ಸರೋಜಾ, ಹರೀಶ್ ಹೆಗ್ಡೆ, ಪರಮೇಶ, ಸುರೇಶ್, ತಾಲೂಕ್ ಸಂಜೀವಿನಿ ವಲಯ ಮೇಲ್ವಿಚಾರಕ ಸ್ವಸ್ತಿಕ್ ಜೈನ್ ಜೊತೆಗಿದ್ದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಉಷಾ ಕಾಮತ್ ಮಹಿಳಾ ದಿನಾಚರಣೆ ಬಗ್ಗೆ ಮಾಹಿತಿ ನೀಡಿದರು. ತಾಲೂಕು ಮಹಿಳಾ ದಿನಾಚರಣೆಯಲ್ಲಿ ಸಿಕ್ಕಿದ ವಲಯ ಮಟ್ಟದಲ್ಲಿ ಉತ್ತಮ ಪ್ರಶಸ್ತಿ ಪಡೆದ ನಿಸರ್ಗ ಸಂಜೀವಿನಿ ಒಕ್ಕೂಟ ಅಂಡಿಂಜೆಯನ್ನು ಗೌರವಿಸಲಾಯಿತು.
ಮಹಿಳೆಯರಿಗೆ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿ ಅವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ದ್ವಿತೀಯ ದರ್ಜೆ ಲೆಕ್ಕ ಸಹಾಯಕಿ ಮಮತಾ ಕಾರ್ಯಕ್ರಮದ ನಿರೂಪಣೆ ಮಾಡಿ ಕೃಷಿ ಸಖಿ ವತ್ಸಲಾ ಧನ್ಯವಾದ ಮಾಡಿದರು.