

ಬಳಂಜ: ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಬಳಂಜ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೊಲ್ಲಾಜೆ, ಕಡೆಂಗಾಲು, ಅಚ್ಚಾಡಿ ಸಂಪರ್ಕ ರಸ್ತೆಯನ್ನು ಅಗಲಗೊಳಿಸಿ ಡಾಮರೀಕರಣ ಮಾಡಿಸಿಕೊಡುವಲ್ಲಿ ಸರಕಾರದ ಮೇಲೆ ಒತ್ತಡ ಹೇರಲು ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ರವರನ್ನು ಮಾ. 24ರಂದು ಆ ಭಾಗದ ಗ್ರಾಮಸ್ಥರು ಒಟ್ಟು ಸೇರಿ ಭೇಟಿಯಾಗಿ ಮನವಿಯನ್ನು ನೀಡಲಾಯಿತು.
ಮನವಿಯನ್ನು ಸ್ವೀಕರಿಸಿ ಮಾತನಾಡಿದ ರಕ್ಷಿತ್ ಶಿವರಾಮ್ ರವರು ಈ ಕುರಿತು ಸಂಬಂಧಪಟ್ಟ ಇಲಾಖೆಯವರ ಜೊತೆಗೆ ಚರ್ಚಿಸಿ ಅತೀ ಶೀಘ್ರವಾಗಿ ರಸ್ತೆ ಡಾಮರಿಕರಣ ಮಾಡಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಮಾಜಿ ತಾಲೂಕು ಪಂಚಾಯತ್ ಸದಸ್ಯ ಹೆಚ್.ದರ್ಣಪ್ಪ ಪೂಜಾರಿ, ಗ್ರಾಮ ಪಂಚಾಯತ್ ಸದಸ್ಯ ರವೀಂದ್ರ ಬಿ.ಅಮೀನ್, ಯುವ ನಾಯಕ ದೀಪಕ್ ಹೆಚ್.ಡಿ., ಕಾಂಗ್ರೆಸ್ ಮುಖಂಡರಾದ ಜೆರಾಮ್ ಲೋಬೋ, ಪುರಂದರ ಪೂಜಾರಿ ಪೆರಾಜೆ, ಆಶ್ವಿನ್ ಬಿ. ಕೆ., ಅಳದಂಗಡಿ ಸಹಕಾರಿ ಸಂಘದ ನಿರ್ದೇಶಕರಾದ ಹೆಚ್.ದೇಜಪ್ಪ ಪೂಜಾರಿ, ಹರೀಶ್ ಮಜ್ಜೆನಿ, ಧರ್ಣಪ್ಪ ಗುಂಡಿದಡ್ಡ, ಪ್ರವೀಣ್ ಬೊಟ್ಟುದಡ್ಡ, ಸದಾನಂದ ಸಾಲಿಯಾನ್ ಬಳಂಜ ಪ್ರವೀಣ್ ಗಾಂದೋಟ್ಟು ಸೇರಿದಂತೆ ಬೊಲ್ಲಾಜೆ, ಕಡೆಂಗಾಲು ಭಾಗದ 40ಕ್ಕೂ ಹೆಚ್ಚು ಮಂದಿ ಗ್ರಾಮಸ್ಥರು ಉಪಸ್ಥಿತರಿದ್ದರು.