

ಗಂಡಿಬಾಗಿಲು: ಸಿಯೋನ್ ಆಶ್ರಮ ಟ್ರಸ್ಟ್ ನಲ್ಲಿ ಮಾ. 24ರಂದು ಸಂಸ್ಥೆಯ ಟ್ರಸ್ಟಿ ಸದಸ್ಯೆ ಮೇರಿ ಯು. ಪಿ. ರವರ ನಿಸ್ವಾರ್ಥ ಸಮಾಜ ಸೇವೆಯನ್ನು ಗುರುತಿಸಿ ಬೆಳ್ತಂಗಡಿ ತಾಲೂಕು ಮಹಿಳಾ ಮಂಡಲದ ವತಿಯಿಂದ ಗೌರವಪೂರ್ವಕವಾಗಿ ಸನ್ಮಾನಿಸಿದರು.

ಬೆಳ್ತಂಗಡಿ ತಾಲೂಕು ಮಹಿಳಾ ಮಂಡಲದ ಅಧ್ಯಕ್ಷೆ ಸವಿತಾ ಜೈದೇವ್, ಕಾರ್ಯದರ್ಶಿ ಆಶಾ ಸತೀಶ್, ಮಹಾ ಪೋಷಕರು ಲೋಕೇಶ್ವರಿ ವಿನಯ್ ಚಂದ್ರ, ಗೌರವ ಅಧ್ಯಕ್ಷೆ ಶಾಂತ ಬಂಗೇರ, ಖಜಾಂಚಿ ಉಷಾ ಲಕ್ಷ್ಮಣ್ ಗೌಡ, ಸದಸ್ಯರುಗಳು, ಸಿಯೋನ್ ಆಶ್ರಮದ ಮ್ಯಾನೇಜಿಂಗ್ ಟ್ರಸ್ಟಿ ಡಾ. ಯು. ಸಿ. ಪೌಲೋಸ್, ಟ್ರಸ್ಟಿ ಸದಸ್ಯರುಗಳು, ಆಡಳಿತ ಮಂಡಳಿಯವರು, ಸಿಬ್ಬಂದಿ ವರ್ಗದವರು ಮತ್ತು ಆಶ್ರಮ ನಿವಾಸಿಗಳೆಲ್ಲರೂ ಉಪಸ್ಥಿತರಿದ್ದರು.