

ಬೆಳ್ತಂಗಡಿ: ವೇಣೂರು ಪೋಲಿಸ್ ಠಾಣಾ ವ್ಯಾಪ್ತಿಯ ನಾಲ್ಕೂರು ಗ್ರಾಮದ ಮಜಲು ಸೂಲಬೆಟ್ಟು ಹೊಗೆಯಿಂದ ಅಕ್ರಮವಾಗಿ ಮರಳು ತೆಗೆದು ಸಾಗಿಸುತ್ತಿದ್ದನ್ನು ಪತ್ತೆ ಹಚ್ಚಿರುವ ಘಟನೆ ಮಾ.22 ರಂದು ಸಂಜೆ ನಡೆದಿದೆ.
ಠಾಣೆಗೆ ಬಂದ ಖಚಿತ ಮಾಹಿತಿ ಮೇರೆಗೆ ವೇಣೂರು ಠಾಣಾ ಪಿ. ಎಸ್. ಐ ಶ್ರೀಶೈಲಾ ಡಿ ಮತ್ತು ಸಿಬ್ಬಂದಿಗಳಾದ ರವೀಂದ್ರ ಬಸವರಾಜ್, ಸತ್ಯ ಪ್ರಕಾಶ್ ಜೊತೆ ಸೇರಿ ದಾಳಿ ಮಾಡಿದ್ದು, ಸ್ಥಳದಲ್ಲಿ ಮರೋಡಿಯ ಹೇಮಚಂದ್ರ ಎಂಬಾತ ಪಿಕಪ್ ವಾಹನಕ್ಕೆ ಮರಳು ತುಂಬಿಸುವ ಸಂದರ್ಭದಲ್ಲಿ ವಶಕ್ಕೆ ಪಡೆದಿದ್ದಾರೆ.
ಓರ್ವನನ್ನು ವಶಕ್ಕೆ ಪಡೆದು ಇದರ ಜೊತೆಗೆ ಪಿಕಪ್ ವಾಹನ, ಮರಳು, ಬುಟ್ಟಿ ಮತ್ತು ಹಾರೆಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.