

ನಿಡ್ಲೆ: ಸುದ್ದಿ ಸಮೂಹ ಸಂಸ್ಥೆಗಳ ಪಿ. ಆರ್. ಓ ಮತ್ತು ಕನ್ಸಲ್ಟೆಂಟ್ ಆಗಿರುವ ರಾಘವ ಶರ್ಮರವರ ತಂದೆ ಕೃಷಿಕ ನಿಡ್ಲೆ ಕೃಷ್ಟ ಭಟ್ (78ವ) ಹೃದಯಾಘಾತದಿಂದ ನಿಧನರಾಗಿದ್ದಾರೆ.
ಅಲ್ಪಕಾಲದ ಅಸೌಖ್ಯದ ಹಿನ್ನಲೆಯಲ್ಲಿ ಉಜಿರೆ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ತಡರಾತ್ರಿ 12.30ರ ಸುಮಾರಿಗೆ ವಿಧಿವಶರಾಗಿದ್ದು, ಮಾ. 23ರಂದು ಬೆಳಗ್ಗೆ 11ಗಂಟೆಯೊಳಗೆ ಅಂತಿಮಸಂಸ್ಕಾರ ನಡೆಯಲಿದೆ. ಕೃಷ್ಣಭಟ್ ರವರು ಪತ್ನಿ ಸವಿತಾಭಟ್, ಮಕ್ಕಳಾದ ರಾಘವ ಶರ್ಮ, ರಮ್ಯ, ಸೊಸೆ ಪೃಥ್ವಿ ರಾಘವ ಶರ್ಮ ರವರನ್ನು ಅಗಲಿದ್ದಾರೆ.