

ವೇಣೂರು: ಅಕ್ರಮವಾಗಿ ಮೂರು ಜಾನುವಾರುಗಳನ್ನು ಹಿಂಸಾತ್ನಕವಾಗಿ ಟೆಂಪೋದಲ್ಲಿ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ವೇಣೂರು ಠಾಣಾ ಪೊಲೀಸರು ವಶಕ್ಕೆ ಪಡೆದುಕೊಂಡು ಆರೋಪಿಗಳಿಬ್ಬರನ್ನು ಬಂಧಿಸಿ ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿದ ಘಟನೆ ಮಾ. 22ರಂದು ನಡೆದಿದೆ.
ನಾಲ್ಕೂರು ಗ್ರಾಮದ ಕುಕ್ಕನಡ್ಕ ಎಂಬಲ್ಲಿ ಬಳಂಜ –ಪೆರ್ಮುಡ – ವೇಣೂರು ಸಾರ್ವಜನಿಕ ರಸ್ತೆಯಲ್ಲಿ ರೌಂಡ್ಸ್ ಕರ್ತವ್ಯ ನಿರತರಾಗಿದ್ದಾಗ ಆರೋಪಿತರಾದ ಬೆಳ್ತಂಗಡಿ ಕೋರ್ಟ್ ರಸ್ತೆ ಸಂಜಯನಗರ ನಿವಾಸಿ ಇಮ್ತೀಯಾಜ್ ( 29) ಮತ್ತು ಪಡಂಗಡಿ ಗ್ರಾಮದ ಪಾದೆ ಮನೆ ) ರಮ್ಲ ಯಾನೆ ಆಸೀಪ್ (26) ಎಂಬಿಬ್ಬರು ಕ್ಯಾರಿ ಟರ್ಬೋ ವಾಹನದಲ್ಲಿ ಯಾವುದೇ ಪರವಾಣಿಗೆ ಇಲ್ಲದೇ ಅಕ್ರಮವಾಗಿ ಗೋವಧೆ ಮಾಡುವ ಸಲುವಾಗಿ ಹಿಂಸಾತ್ಮಕವಾಗಿ 3 ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದುದ್ದನ್ನು ಪತ್ತೆ ಹಚ್ಚಿದ್ದಾರೆ.