

ಕೊಕ್ಕಡ: ಪತ್ನಿ ತವರು ಮನೆಗೆ ಹೋಗಿರುವುದರಿಂದ ಮನನೊಂದು 38 ವರ್ಷದ ಯುವಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಪಟ್ಲಡ್ಕದಲ್ಲಿ ವರದಿಯಾಗಿದೆ.
ಮೃತನನ್ನು ಪಡ್ಲಡ್ಕ ನಿವಾಸಿ, ಕೊಕ್ಕಡದಲ್ಲಿ ರಿಕ್ಷಾ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದ ಶೇಸಪ್ಪ(38) ಎಂದು ಗುರುತಿಸಲಾಗಿದೆ. ಅವರು ವಿಪರೀತವಾಗಿ ಅಮಲು ಪದಾರ್ಥ ಸೇವಿಸುವ ಚಟವನ್ನು ಹೊಂದಿದ್ದು, ಮಾ. 20ರಂದು ಸಂಜೆ 6 ಗಂಟೆ ಸುಮಾರಿಗೆ ತಾಯಿ ಅವರೊಂದಿಗೆ ರಗಳೆ ಮಾಡಿಕೊಂಡಿದ್ದಾರೆ.
ತಾಯಿ ಹತ್ತಿರದ ಮನೆಯತ್ತ ತೆರಳಿದ್ದರು. ರಾತ್ರಿ 9 ಗಂಟೆಗೆ ಮನೆಗೆ ಹಿಂದಿರುಗಿದಾಗ, ಅವರು ಶೇಸಪ್ಪನನ್ನು ಮನೆಯ ಹಾಲ್‌ನಲ್ಲಿ , ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಕಂಡು ಬೊಬ್ಬೆ ಹೊಡೆದರು.
ಅಕ್ಕಪಕ್ಕದವರು ಓಡಿ ಬಂದು ಶೇಸಪ್ಪನನ್ನು ಕೆಳಗೆ ಇಳಿಸಿ ತಕ್ಷಣವೇ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದರು. ಅಲ್ಲಿಯ ವೈದ್ಯರು ಪರೀಕ್ಷಿಸಿ ಸೇಸಪ್ಪ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ತಾಯಿ ರಾಮಕ್ಕ ಅವರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.