

ಬೆಳ್ತಂಗಡಿ: ತಾಲೂಕಿನ ನೆರಿಯ ಬಯಲು ನಿವಾಸಿ ತನಿಯಪ್ಪ ನಲಿಕೆ(69 ವ) ಇವರು ಅಲ್ಪಕಾಲದ ಅಸೌಖ್ಯದಿಂದ ಮಾ. 23ರಂದು ತಮ್ಮ ಸ್ವ ಗೃಹದಲ್ಲಿ ನಿಧನ ಹೊಂದಿದರು.
ಇವರು ಮಾಕಳ, ಓಣ್ಯಾಯ, ಬಯಲು ದೊಂಪದ ಬಲಿ, ಹಾರಗಂಡಿ ನೇರೋಳ್ದಡಿ ಮುಂತಾದ ಕಡೆಗಳಲ್ಲಿ ದೈವ ನರ್ತನ ಸೇವೆ ಮಾಡುತಿದ್ದರು. ಇವರು ಪತ್ನಿ ಕೂಸಮ್ಮ, ಮಕ್ಕಳಾದ ಹೇಮಾವತಿ, ಪದ್ಮಾವತಿ, ಸುಮತಿ, ಹರೀಶ, ಸತೀಶ್, ವಿನಯರವರನ್ನು ಅಗಲಿದ್ದಾರೆ.