ಉಜಿರೆಯಲ್ಲಿ “ವಿಜಯಗೋಪುರ ನಿರ್ಮಾಣ: ಮಾತೃಶಕ್ತಿ ಶಿಲಾ ಸಂಚಯನ ಸಮಿತಿ ರಚನೆ

0

ಉಜಿರೆ: ಶ್ರೀ ಜನಾರ್ದನ ದೇವಸ್ಥಾನದ ಮುಂಭಾಗದಲ್ಲಿ ನೂತನವಾಗಿ “ವಿಜಯಗೋಪುರ “ನಿರ್ಮಾಣಗೊಳ್ಳಲಿದ್ದು ಅದರ ನಿರ್ಮಾಣ ಕಾರ್ಯದಲ್ಲಿ ಭಕ್ತಾದಿಗಳು ಪಾಲ್ಗೊಳ್ಳಲು ಅನುಕೂಲವಾಗುವಂತೆ    ಇಟ್ಟಿಗೆಗಳನ್ನು ಸೇವಾರೂಪದಲ್ಲಿ ಒದಗಿಸಲು ಅವಕಾಶ ಕಲ್ಪಿಸಲಾಗಿದೆ.

ಅದರ ಜವಾಬ್ದಾರಿಯನ್ನು ಉಜಿರೆಯ ಮಹಿಳೆಯರಿಗೆ ಅವಕಾಶ ಕಲ್ಪಿಸಲಾಗಿದ್ದು ಅದಕ್ಕಾಗಿ ಮಾತೃಶಕ್ತಿ ಶಿಲಾ ಸಂಚಯನ ಸಮಿತಿ ರಚಿಸಲಾಗಿದೆ. ಗ್ರಾಮದ ಮಹಿಳೆಯರನ್ನು ಒಗ್ಗೂಡಿಸಿ ನಿಧಿ ಸಂಗ್ರಹ ಕಾರ್ಯದಲ್ಲಿ  ತೊಡಗಿಸಿಕೊಳ್ಳಲು ಮಾ. 19ರಂದು ಉಜಿರೆ ಶ್ರೀ ಶಾರದಾ ಮಂಟಪದಲ್ಲಿ ಶ್ರೀ ಜನಾರ್ದನ ದೇವಸ್ಥಾನದ  ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ  ಪಡುವೆಟ್ನಾಯರ ನೇತೃತ್ವದಲ್ಲಿ ನಡೆದ ಗ್ರಾಮದ ಮಹಿಳೆಯರ ಸಮಾಲೋಚನಾ ಸಭೆಯಲ್ಲಿ ಮಾತನಾಡಿ ಶ್ರೀ ಜನಾರ್ದನ ದೇವಸ್ಥಾನದ ಕೆಲಸ ಕಾರ್ಯಗಳಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ. ಬ್ರಹ್ಮಕಲಶೋತ್ಸವ ಹಾಗು ರಾಜಗೋಪುರ ನಿರ್ಮಾಣ ಕಾರ್ಯದಲ್ಲಿ ಮಹಿಳೆಯರ  ಮಾತೃಶಕ್ತಿಯ ಸೇವೆ ನಿರಂತರವಾಗಿರಲಿ ಎಂದರು.

ಮಾತೃಶಕ್ತಿ ಶಿಲಾ ಸಂಚಯನ ಸಮಿತಿ ಸಂಚಾಲಕ  ಮಂಜುನಾಥ ಶೆಟ್ಟಿ ನಿಡಿಗಲ್  ಮಾಹಿತಿ ನೀಡಿ ಉಜಿರೆ ಗ್ರಾಮದ 13  ವಾರ್ಡ್ ಗಳಲ್ಲಿ  ಆಯಾ ವಾರ್ಡಿನ  ಸದಸ್ಯರಲ್ಲಿ  ಸಂಚಾಲಕರು ಹಾಗು ಸಹ ಸಂಚಾಲಕರನ್ನು ನೇಮಿಸಿ  ಅವರಿಗೆ ರೂ 250ರ 10 ರಶೀದಿಯ ಕೂಪನಿನ ಪುಸ್ತಕ  ನೀಡಲಾಗುತ್ತದೆ.

ಅದನ್ನು ಅವರು ತಮಗೆ ಪರಿಚಯದವರಿಗೆ ನೀಡಿ ಧನ ಸಂಗ್ರಹ ಕಾರ್ಯದಲ್ಲಿ ನೆರವಾಗಬೆಕು ಎಂದು ನುಡಿದರು. ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾಕಿರಣ್ ಕಾರಂತ್ ಅವರ ನೇತೃತ್ವದಲ್ಲಿ ಗ್ರಾಮದ 13  ವಾರ್ಡ್ ಗಳಲ್ಲಿ ಸಂಚಾಲಕರನ್ನು ನಿಯುಕ್ತಿಗೊಳಿಸಿ ಅವರಿಗೆ ಮಾಹಿತಿ ನೀಡಲಾಯಿತು.

ಮಹಿಳಾ ಸಮಿತಿ ಅಧ್ಯಕ್ಷೆ ಜಯಶ್ರೀ ಪ್ರಕಾಶ್ ಅಪ್ರಮೇಯ ಮತ್ತು ಮಾತೃಶಕ್ತಿ ಶಿಲಾ ಸಂಚಯನ ಸಮಿತಿ ಸಂಚಾಲಕಿ ವನಿತಾ ವಿ. ಶೆಟ್ಟಿ  ಅವರು ಎಲ್ಲರ ಸಹಕಾರ ಕೋರಿದರು. ವೇದಿಕೆಯಲ್ಲಿ ಸಹ ಕೋಶಾಧಿಕಾರಿ ಸಂಜೀವ ಶೆಟ್ಟಿ ಕುಂಟಿನಿ ಉಪಸ್ಥಿತರಿದ್ದರು.  ಜತೆಕಾರ್ಯದರ್ಶಿ  ರವೀಂದ್ರ ಶೆಟ್ಟಿ ಬಳಂಜ  ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ವನಿತಾ ವಿ.ಶೆಟ್ಟಿ  ವಂದಿಸಿದರು.

LEAVE A REPLY

Please enter your comment!
Please enter your name here