

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಇದರ 2024-25ನೇ ಸಾಲಿನ ವಾರ್ಷಿಕೋತ್ಸವ ಕಾರ್ಯಕ್ರಮವು ಮಾ. 21ರಂದು ಕಾಲೇಜು ಒಳಾವರಣದಲ್ಲಿ ನಡೆಯಿತು.
ಸಭಾಧ್ಯಕ್ಷತೆಯನ್ನು ಡಾ.ಡಿ ವೀರೇಂದ್ರ ಹೆಗ್ಗಡೆಯವರು ವಹಿಸಿ ಮಾತನಾಡಿ ಬಹಳ ಜನರನ್ನು ನಾನು ಸನ್ಮಾನಿಸಿದೆ. ಎಲ್ಲರೂ ಸಂಸ್ಥೆಗೆ ಸೇವೆಯನ್ನು ಮಾಡಿದವರು, ಒಳ್ಳೆಯ ಭವಿಷ್ಯವನ್ನು ಪಡೆದಿದ್ದಾರೆ. ವಿದ್ಯಾರ್ಥಿಗಳಲ್ಲಿ ಬಹಳ ಪ್ರತಿಭೆ ಇದೆ ತುಂಬಾ ಪ್ರಶಸ್ತಿಗಳನ್ನು ಪಡೆದಿದ್ದಾರೆ. ನಮ್ಮ ಸಂಸ್ಥೆಯಲ್ಲಿ ಎಲ್ಲರೂ ಒಂದು ಎಸ್. ಡಿ. ಎಂ ಕುಟುಂಬದಂತೆ ಇದ್ದು ಈ ಸಂಸ್ಥೆಯ ಸ್ಪೂರ್ತಿಯನ್ನು ಇಡೀ ಕರ್ನಾಟಕಕ್ಕೆ ತೆಗೆದುಕೊಂಡು ಹೋಗಿದ್ದೇವೆ.

ಯಶೋವರ್ಮರವರು ಈ ಸಂಸ್ಥೆಯನ್ನು ನಡೆಸುವಾಗ ಎಲ್ಲಾ ಕಡೆ ಒಂದೇ ಭಾವನೆಯನ್ನು ತಂದಿದ್ದಾರೆ. ಇಲ್ಲಿ ಕಲಿತ ವಿಧ್ಯಾರ್ಥಿಗಳು ಒಳ್ಳೆಯ ಭವಿಷ್ಯ ಮತ್ತು ಉದ್ಯೋಗವನ್ನು ಪಡೆದಿದ್ದಾರೆ, ವಿದ್ಯಾರ್ಥಿಗಳು ಒಳ್ಳೆಯ ವಿಷಯವನ್ನು ತಿಳಿದುಕೊಳ್ಳಿ ಮತ್ತು ನಿಧಾನವಾಗಿ ಅರಗಿಸಿಕೊಳ್ಳಬೇಕು. ತಲೆ ಎಂಬುದು ಕಸದ ಬುಟ್ಟಿಯಲ್ಲ ಅದರಲ್ಲಿ ವಿಷಯವನ್ನು ತುಂಬಿಸಿಕೊಳ್ಳುವಾಗ ಬಹಳ ಜಾಗೃತವಾಗಿ ಇರಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಎನ್.ಐ.ಟಿ.ಕೆ ಸುರತ್ಕಲ್ ನಿರ್ದೇಶಕ ಪ್ರೊ.ಬಿ.ರವಿ, ಎಸ್. ಡಿ. ಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಡಿ. ಹರ್ಷೇಂದ್ರ ಕುಮಾರ್, ಡಾ.ಸತೀಶ್ ಚಂದ್ರ, ಎಸ್. ಎಸ್. ಶಲೀಫ, ಎಸ್. ಎನ್. ಕಾಕತ್ಕರ್, ಕುಮಾರ್ ಹೆಗ್ಡೆ, ಶಾಂತಿ ಪ್ರಕಾಶ್, ರಾಮಚಂದ್ರ ಪುರೋಹಿತ್, ಡಾ. ಹೇಮಾವತಿ ಹೆಗ್ಗಡೆ, ಸೋನಿಯಾ ಯಶೋವರ್ಮ, ಸುಪ್ರಿಯಾ ಹರ್ಷೇಂದ್ರ ಕುಮಾರ್, ಸದಾನಂದ ಮುಂಡಾಜೆ, ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು,

ಕಾರ್ಯಕ್ರಮವನ್ನು ಕಾಲೇಜು ವಿದ್ಯಾರ್ಥಿನಿಯರು ಪ್ರಾರ್ಥಿಸಿ, ಕಾಲೇಜು ಪ್ರಾಂಶುಪಾಲ ಪ್ರೊ. ವಿಶ್ವನಾಥ್ ಪಿ . ಸ್ವಾಗತಿಸಿ, ಉಪಪ್ರಾಂಶುಪಾಲ ನಂದಾ ಕುಮಾರಿ ವರದಿ ವಾಚಿಸಿದರು.

ವೇದಿಕೆಯಲ್ಲಿ ನಿವೃತ್ತ ಬೋಧಕ – ಬೋಧಕೇತರ ಸಿಬ್ಬಂದಿಗಳನ್ನು, ರಾಂಕ್ ವಿಜೇತರನ್ನು, ಪಿ. ಹೆಚ್. ಡಿ. ಪದವೀಧರರನ್ನು, ವಿಶೇಷ ಸಾಧಕ ಅಧ್ಯಾಪಕರನ್ನು ಗೌರವಿಸಲಾಯಿತು. ಹಾಗೂ ವಿಶೇಷ ಸಾಧಕ ವಿದ್ಯಾರ್ಥಿಗಳಿಗೆ ಮತ್ತು ಕ್ರೀಡಾ ವಿಭಾಗದ ಸಾಧಕರಿಗೆ ಬಹುಮಾನ ವಿತರಣೆಯನ್ನು ಮಾಡಲಾಯಿತು.
ಪ್ರೊ.ಶ್ರೀಧರ ಎನ್.ಭಟ್, ಡಾ. ನೆಫಿಸತ್ ನಿರೂಪಿಸಿ, ಆಡಳಿತ ಮಂಡಳಿಯ ಕುಲಸಚಿವ ಪ್ರೊ.ಶ್ರೀಧರ ಎನ್ .ಭಟ್ ವಂದಿಸಿದರು.
,