

ಉಜಿರೆ: ಶ್ರೀ ಜನಾರ್ದನ ದೇವಸ್ಥಾನದ ರಾಜಗೋಪುರ ನಿರ್ಮಾಣ ಸಮಿತಿ ಆಶ್ರಯದಲ್ಲಿ ವಿಜಯಗೋಪುರ ನಿರ್ಮಾಣದ ಪ್ರಯುಕ್ತ ಮಾತೃಶಕ್ತಿ ಶಿಲಾ ಸಂಚಯನ ಕೂಪನ್ ಬಿಡುಗಡೆ ನಡೆಯಲಿದ್ದು, ಮಾ. 24ರಂದು ರಾತ್ರಿ 7.3೦ರಿಂದ ಉಜಿರೆ ಶ್ರೀ ಕೃಷ್ಣಾನುಗ್ರಹ ಸಭಾಭವನದ ಕೆಳಗಿನ ಮೈದಾನದಲ್ಲಿ ವಿಶೇಷ ಆಕರ್ಷಣೆಯೊಂದಿಗೆ ವಿಭಿನ್ನ ರೀತಿಯ ತುಳು ನಾಟಕ “ಶಿವದೂತೆ ಗುಳಿಗೆ” ಪ್ರದರ್ಶಿಸಲ್ಪಡಲಿದೆ.
ಸಾರ್ವಜನಿಕರಿಗೆ ಉಚಿತ ಪ್ರದರ್ಶನವಾಗಿದ್ದು, ವೈವಿಧ್ಯಮಯ ಚಾಟ್ಸ್, ಫಲಾಹಾರ ಮಳಿಗೆಗಳ ವ್ಯವಸ್ಥೆಯಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘಟಕರು ವಿನಂತಿಸಿಕೊಂಡಿದ್ದಾರೆ.