

ಬೆಳ್ತಂಗಡಿ: ಸಂಜಯ್ ಗ್ಲೋಬಲ್ ಫೌಂಡೇಶನ್ ಬೆಳ್ತಂಗಡಿ ವತಿಯಿಂದ ಮಾ. 20ರಂದು ಖಿಲರ್ ಜುಮ್ಮಾ ಮಸೀದಿ ಬೆಳ್ತಂಗಡಿಯಲ್ಲಿ ಇಫ್ತಾರ್ ಮೀಟ್ ಕಾರ್ಯಕ್ರಮ ನಡೆಯಿತು. ಸಂಜಯ್ ಗ್ಲೋಬಲ್ ಫೌಂಡೇಶನ್ ಅಧ್ಯಕ್ಷ ರಶೀದ್ ಬೆಳ್ತಂಗಡಿ ನೇತೃತ್ವದಲ್ಲಿ ಇಫ್ತಾರ್ ಕಾರ್ಯಕ್ರಮ ನಡೆಯಿತು. ಖಿಲರ್ ಜುಮ್ಮಾ ಮಸೀದಿ ಅಧ್ಯಕ್ಷ ನಝೀರ್ ಬಿ. ಎ., ದಾರುಸ್ಸಲಾಂ ದಾವಾ ಸೆಂಟರ್ ಬೆಳ್ತಂಗಡಿ ಇದರ ಮುಖ್ಯಸ್ಥ ತ್ವಾಹ ತಂಙಳ್, ಮಸೀದಿ ಖತೀಬರಾದ ಹನೀಫ್ ಫೈಝಿ ಅತಿಥಿಗಳಾಗಿ ಆಗಮಿಸಿದ್ದರು.

ಸಂಜಯ್ ಗ್ಲೋಬಲ್ ಫೌಂಡೇಶನ್ ಬೆಳ್ತಂಗಡಿ ಪದಾಧಿಕಾರಿಗಳಾದ ರಿಯಾಝ್, ಹನೀಫ್, ಇಸ್ಮಾಲಿ, ಮಹಮ್ಮದ್ ಕುದ್ರಡ್ಕ, ಶಫೀರ್ ಬೆಳ್ತಂಗಡಿ, ಜಮಾತ್ ಬಾಂದವರು ಇಫ್ತಾರ್ ಕಾರ್ಯಕ್ರಮ ಪಾಲ್ಗೊಂಡರು.