

ಬೆಳ್ತಂಗಡಿ: ಕಾಫಿ ಬೋರ್ಡ್ ವತಿಯಿಂದ ತಜ್ಞರ ತಂಡವು ಕಾಫಿ ಬೆಳೆ ಬೆಳೆಯಲು ಬೆಳ್ತಂಗಡಿ ತಾಲೂಕಿನ 14 ಗ್ರಾಮಗಳು ಸೂಕ್ತವಾಗಿದೆ ಎಂದು ತಿಳಿಸಿದ್ದಾರೆ.

ಮಲವಂತಿಗೆ, ಮಿತ್ತಬಾಗಿಲು, ಕಡಿರುದ್ಯಾವರ, ಮುಂಡಾಜೆ, ಚಾರ್ಮಾಡಿ, ತೋಟತ್ತಾಡಿ, ಚಿಬಿದ್ರೆ, ಸವಣಾಲು, ಶಿರ್ಲಾಲು, ಕುತ್ಲೂರು, ಶಿಶಿಲ, ಶಿಬಾಜೆ, ನೆರಿಯ ಹಾಗೂ ಅರಸಿನಮಕ್ಕಿ ಗ್ರಾಮಗಳಲ್ಲಿನ ಆಸಕ್ತ ರೈತರು ಕಾಫಿ ಬೆಳೆಯಲು ಇಚ್ಚಿಸಿದ್ದಲ್ಲಿ ಮೂಡಿಗೆರೆ ಹಾಗೂ ಸಕಲೇಶಪುರ ಕಾಫಿ ಬೋರ್ಡ್ ಅಧಿಕಾರಿಗಳನ್ನು ಸಂಪರ್ಕಿಸಲು ಜಿಲ್ಲಾ ಪಂಚಾಯತ್ ನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ.