ಗೆಜ್ಜೆಗಿರಿ ಕ್ಷೇತ್ರದಲ್ಲಿ ಜಾತ್ರಾ ಮಹೋತ್ಸವ: ತಾಯಂದಿರಿಂದ ಅಮ್ಮನ ಮಡಿಲ ಪ್ರಸಾದ ಸ್ವೀಕಾರ

0

ಬೆಳ್ತಂಗಡಿ: ಆದಿದೈವ ಧೂಮಾವತಿ, ಸಾಯನ ಬೈದ್ಯರ ಗುರುಪೀಠ ದೇಯಿ ಬೈದ್ಯೆತಿ ಕೋಟಿ-ಚೆನ್ನಯರ ಮೂಲಸ್ಥಾನವಾದ ನಂದನಬಿತ್ತ್‌ಲ್ ಶ್ರೀ ಕ್ಷೇತ್ರ ಗೆಜ್ಜೆಗಿರಿಯ ವಾರ್ಷಿಕ ಜಾತ್ರಾ ಮಹೋತ್ಸವ ಮಾ.೨ರಂದು ಅದ್ದೂರಿಯಾಗಿ ನಡೆಯಿತು. ಊರ-ಪರವೂರಿನ ಸಾವಿರಾರು ಭಕ್ತರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು. ವಿಶೇಷವಾಗಿ ದಕ್ಷಿಣ ಭಾರತದಲ್ಲೇ ಪ್ರಥಮ ಬಾರಿಗೆ ನಡೆದ ‘ಅಮ್ಮನ ಮಡಿಲ ಪ್ರಸಾದ’ ಕಾರ್ಯಕ್ರಮ ಕ್ಷೇತ್ರದ ಸತ್ಯಧರ್ಮ ಚಾವಡಿಯಲ್ಲಿ ನಡೆಯಿತು. ನಾಡಿನ ಮೂಲೆ ಮೂಲೆಗಳಿಂದ ಆಗಮಿಸಿದ ಸಾವಿರಾರು ಮಾತೆಯರು ಅಮ್ಮನ ಮಡಿಲ ಪ್ರಸಾದ ಸ್ವೀಕರಿಸಿದರು. ಜಾತ್ರಾ ಮಹೋತ್ಸವದ ಪ್ರಯುಕ್ತ ಬೆಳಿಗ್ಗೆ ಮೂಡಬಿದ್ರೆ ಶಿವಾನಂದ ತಂತ್ರಿಯವರ ನೇತೃತ್ವದಲ್ಲಿ ಗಣಪತಿ ಹೋಮ, ಗುರುಪೂಜೆ, ತೋರಣ ಮುಹೂರ್ತ, ನಾಗದೇವರ ಸಾನಿಧ್ಯದಲ್ಲಿ ಗಣಹೋಮ, ನವಕ ಕಲಶಾಭಿಷೇಕ, ಆಶ್ಲೇಷ ಬಲಿ ಸೇವೆ ನಡೆದು ಮಂಗಳಾರತಿ, ಧೂಮವತಿ ಸಾನಿಧ್ಯ ಹಾಗೂ ಎಲ್ಲಾ ಪರಿವಾರಗಳ ಸಾನಿಧ್ಯದಲ್ಲಿ ಶುದ್ಧಿ ನವಕ ಕಲಶಾಭಿಷೇಕ ನಡೆಯಿತು. ಬೆಳಿಗ್ಗೆ 11.18ರ ವೃಷಭ ಲಗ್ನದಲ್ಲಿ ಧ್ವಜಾರೋಹಣ, ಪರ್ವ ಸೇವೆ, ಮೂಲಸ್ಥಾನ ಗರಡಿಯಲ್ಲಿ ಮಹಾಪೂಜೆ ನಡೆದು ಪ್ರಸಾದ ವಿತರಣೆ ನಡೆಯಿತು. 12 ಗಂಟೆಯಿಂದ ಅಮ್ಮನ ಮಡಿಲ ಪ್ರಸಾದ ವಿತರಣೆ ಆರಂಭಗೊಂಡಿತು. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಸಂಜೆ ಧೂಮಾವತಿ ಬಲಿ ಉತ್ಸವ, ಧರ್ಮಚಾವಡಿಯಲ್ಲಿ ಭಗವತೀ ಸೇವೆ, ಮಹಾಪೂಜೆ ನಡೆಯಿತು.

ಮಾಜಿ ಶಾಸಕ ಸಂಜೀವ ಮಠಂದೂರು, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ರವಿ ಪೂಜಾರಿ ಚಿಲಿಂಬಿ, ಕಾರ್ಯದರ್ಶಿ ಡಾ.ರಾಜಾರಾಮ್ ಬಿ.ಕೆ, ಗೌರವಾಧ್ಯಕ್ಷರಾದ ಪಿತಾಂಬರ ಹೇರಾಜೆ, ಜಯಂತ ನಡುಬೈಲು, ಬಿಲ್ಲವ ಮಹಾಮಂಡಲದ ಅಧ್ಯಕ್ಷ ರಾಜಶೇಖರ ಕೋಟ್ಯಾನ್, ಮೊಕ್ತೇಸರ ಶ್ರೀಧರ ಪೂಜಾರಿ, ಕೋಶಾಧಿಕಾರಿ ಮೋಹನದಾಸ ಬಂಗೇರ, ಉಪಾಧ್ಯಕ್ಷ ಉಲ್ಲಾಸ್ ಕೋಟ್ಯಾನ್, ಪ್ರಮುಖರಾದ ದೀಪಕ್ ಕೋಟ್ಯಾನ್ ಗುರುಪುರ, ಸಂಜೀವ ಪೂಜಾರಿ ಕೂಚಿಗುಡ್ಡೆ, ಚಂದ್ರಹಾಸ ಅಮೀನ್, ಅಜಿತ್ ಪಾಲೇರಿ, ಸುಧಾಕರ ಪೂಜಾರಿ, ಶಶಿಧರ ಕಿನ್ನಿಮಜಲು, ಡಾ.ಗೀತಾ ಪ್ರಕಾಶ್, ಆನಂದ ಪೂಜಾರಿ ಸರ್ವೆದೋಳ, ರಾಜೇಂದ್ರ ಚಿಲಿಂಬಿ, ನಾರಾಯಣ ಮಚ್ಚಿನ, ಜಯವಿಕ್ರಮ್ ಕಲ್ಲಾಪು, ವರದರಾಜ್ ಎಂ, ಸುಧಾಕರ ಪೂಜಾರಿ ಕೇಪು, ಪದ್ಮನಾಭ ಪೂಜಾರಿ ಅಳಿಕೆ, ವಿಶ್ವಜಿತ್ ಅಮ್ಮುಂಜ, ಅಶೋಕ್ ಕುಮಾರ್ ಪಡ್ಪು, ಮಾಧವ ಪೂಜಾರಿ ವಿಟ್ಲ, ಎಲ್ಯಣ್ಣ ಪೂಜಾರಿ ಮೈರುಂಡ, ಕರುಣಾಕರ ಸುವರ್ಣ ಉಪ್ಪಿನಂಗಡಿ, ವಿನೋದ್ ಕುಂಡಡ್ಕ, ಮೋಹನ್ ಗುರ್ಜಿನಡ್ಕ, ಸಂತೋಷ್ ಕುಮಾರ್, ಎನ್.ಟಿ.ಪೂಜಾರಿ, ಸಂಜೀವ ಪೂಜಾರಿ, ಪ್ರಮಲ್ ಕುಮಾರ್, ಚಂದ್ರಹಾಸ ಅಮೀನ್, ಗಂಗಾಧರ ಅಮೀನ್ ಮುಂಬೈ, ಸುಜಿತ ಬಂಗೇರ, ನವೀನ್ ಸುವರ್ಣ ಸಜಿಪ, ನವೀನ್ ಅಮೀನ್ ಶಂಕರಪುರ, ಹರಿಶ್ಚಂದ್ರ ಅಮೀನ್, ಹರೀಶ್ ಕೆ ಪೂಜಾರಿ, ನಿತ್ಯಾನಂದ ನಾವರ, ವಿದ್ಯಾ ರಾಕೇಶ್, ಉಷಾ ಅಂಚನ್ ನೆಲ್ಯಾಡಿ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.

ಗೆಜ್ಜೆಗಿರಿತ ಅಮರ್ ಬೊಳ್ಳಿಲು ಆಲ್ಪಂ ಸಾಂಗ್ ಬಿಡುಗಡೆ: ಸ್ವರ ಮಾಧುರ್ಯ ಸಂಗೀತ ಬಳಗದ ಸಾರಥ್ಯದಲ್ಲಿ ಪ್ರಜ್ಞಾ ಮತ್ತು ಅಜಿತ್ ಕುಮಾರ್ ಗೋಳಿತ್ತೊಟ್ಟು ಇವರ ನಿರ್ಮಾಣದಲ್ಲಿ ಕಾವ್ಯಶ್ರೀ ಗಡಿಯಾರ ಮತ್ತು ಬಾಲ ಪ್ರತಿಭೆ ಸೋನಿಕಾ ಜನಾರ್ದನ್‌ರವರ ಕಂಠದಲ್ಲಿ ಮೂಡಿ ಬಂದಿರುವ ಗೆಜ್ಜೆಗಿರಿ ಕ್ಷೇತ್ರದ ಕುರಿತ ಗೆಜ್ಜೆ ಗಿರಿತ ಅಮರ್ ಬೊಳ್ಳಿಲು ತುಳು ವೀಡಿಯೋ ಆಲ್ಬಂ ಸಾಂಗ್‌ನ್ನು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಬಿಡುಗಡೆಗೊಳಿಸಿದರು. ಸಹಾಯಕ ಸರಕಾರಿ ಅಭಿಯೋಜಕ ಜನಾರ್ದನ್ ಪುತ್ತೂರುರವರ ಸಾಹಿತ್ಯವಿರುವ ಈ ಹಾಡಿಗೆ ಸವಿತಾ ಅವಿನಾಶ್ ಪುತ್ತೂರು ರಾಗ ಸಂಯೋಜನೆ, ಹಿನ್ನಲೆ ಸಂಗೀತ ಮತ್ತು ರೆಕಾರ್ಡಿಂಗ್ ಅಶ್ವಿನ್ ಬಾಬಣ್ಣ ಸವಿ ಸಂಗೀತ್ ಸ್ಟುಡಿಯೋ ಪುತ್ತೂರು, ವಿಡಿಯೋ ಎಡಿಟಿಂಗ್ ಸಂಗೀತ ಪುತ್ತೂರು ಹಾಗೂ ಸಿ.ಶೇ. ಕಜೆಮಾರ್ ಮಾಧ್ಯಮ ಸಹಕಾರ ನೀಡಿದ್ದಾರೆ. ಗೆಜ್ಜೆಗಿರಿತ ಅಮರ್ ಬೊಳ್ಳಿಲು ಹಾಡಿಗೆ ೫ರ ಹರೆಯದ ಪುಟ್ಟ ಬಾಲೆ ಸೋನಿಕಾ ಜನಾರ್ದನ್ ಧ್ವನಿ ನೀಡಿದ್ದು ವಿಶೇಷವಾಗಿದೆ. ಇವರು ಈಗಾಗಲೇ ಮಂಗಳೂರು ದಸರಾ, ಗೋಕರ್ಣನಾಥೇಶ್ವರ, ಉಡುಪಿ ಕೃಷ್ಣ ಮಠ, ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರು ಕ್ಷೇತ್ರ ಹೀಗೆ ಹಲವು ಕಡೆಗಳಲ್ಲಿ ಭಕ್ತಿ ಸಂಗೀತ ಗಾಯನ ನೀಡಿದ್ದಾರೆ. ಮಂಗಳೂರಿನ ಬೆಸೆಂಟ್ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ಯುಕೆಜಿ ವಿದ್ಯಾರ್ಥಿನಿಯಾಗಿರುವ ಸೋನಿಕಾರವರು ಮೈಸೂರು ಸಿಜೆಎಂ ನ್ಯಾಯಾಲಯದಲ್ಲಿ ಸಹಾಯಕ ಸರಕಾರಿ ಅಭಿಯೋಜಕರಾಗಿರುವ ಜನಾರ್ದನ್ ಪುತ್ತೂರು ಮತ್ತು ಪ್ರಮೀಳಾ.ಕೆರವರ ಪುತ್ರಿ.

ಸಾಂಸ್ಕೃತಿಕ ಕಾರ್ಯಕ್ರಮ: ಬೆಳಿಗ್ಗೆ ಸ್ವರ ಮಾಧುರ್ಯ ಸಂಗೀತ ಬಳಗ ಪುತ್ತೂರು, ಬಾಲಪ್ರತಿಭೆ ಸೋನಿಕಾ ಜನಾರ್ದನ್ ಬಳಗದವರಿಂದ ಭಕ್ತಿ ಗಾಯನ ನಡೆಯಿತು. ಮಧ್ಯಾಹ್ನ ವಿವಿಧ ಭಜನಾ ಮಂಡಳಿ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು. ರಾತ್ರಿ ಶ್ರೀ ಗೆಜ್ಜೆಗಿರಿ ಮೇಳದವರಿಂದ ಶ್ರೀ ದೇವಿ ಮಹಾತ್ಮೆ ಎಂಬ ಯಕ್ಷಗಾನ ಬಯಲಾಟ ನಡೆಯಿತು.
ಇತಿಹಾಸ ಸೃಷ್ಟಿ: ಗೆಜ್ಜೆಗಿರಿ ಕ್ಷೇತ್ರಕ್ಕೆ ಬಂದು ಪ್ರಾರ್ಥನೆ ಮಾಡಿದರೆ ನೋವು-ಕಷ್ಟಗಳು ಮಾಯವಾಗುತ್ತದೆ. ಶರೀರಕ್ಕೆ ಬಂದಿರುವ ರೋಗ ರುಜಿನಗಳು ವಾಸಿಯಾಗುತ್ತವೆ ಎಂಬ ನಂಬಿಕೆ ಇದೆ. ಅದರಂತೆ ಕ್ಷೇತ್ರದಲ್ಲಿ ಆರಾಧಿಸುತ್ತಿರುವ ಮಾತೆ ದೇಯಿ ಬೈದ್ಯೆತಿ ಅಮ್ಮನ ಆಶೀರ್ವಾದ ರೂಪದಲ್ಲಿ ಮಡಿಲು ತುಂಬಿಸುವ ಕಾರ್ಯಕ್ರಮ ‘ಅಮ್ಮನ ಮಡಿಲ ಪ್ರಸಾದ’ ವಿತರಣೆ ಸತ್ಯಧರ್ಮ ಚಾವಡಿಯಲ್ಲಿ ನಡೆಯಿತು.
ದಕ್ಷಿಣ ಭಾರತದ ಇತಿಹಾಸದಲ್ಲೇ ಇಂದೊಂದು ವಿಶೇಷ ಕಾರ್ಯಕ್ರಮವಾಗಿ ಮೂಡಿಬಂತು. ಅಮ್ಮನ ಮಡಿಲ ಪ್ರಸಾದ ಸ್ವೀಕಾರಕ್ಕೆ ಜಿಲ್ಲೆಯ ವಿವಿಧ ಭಾಗಗಳಿಂದ ಜನ ಸಾಗರವೇ ಬಂದಿತ್ತು.
ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಆಗಮಿಸಿದ ಮಾತೆಯರು ಸರತಿ ಸಾಲಿನಲ್ಲಿ ನಿಂತು ಸತ್ಯಧರ್ಮ ಚಾವಡಿಯಲ್ಲಿ ಅಮ್ಮನ ಮಡಿಲ ಪ್ರಸಾದ ಸ್ವೀಕರಿಸಿದರು. ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಶ್ರೀ ಕ್ಷೇತ್ರ ಗೆಜ್ಜೆಗಿರಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು.

ತಾಯಂದಿರಿಗೆ ಸಂಸಾರ, ಸಮಾಜ ತಿದ್ದುವ ಅದ್ಭುತ ಶಕ್ತಿ ಇದೆ-ಕನ್ಯಾಡಿ ಶ್ರೀ: ಗೆಜ್ಜೆಗಿರಿ ಕ್ಷೇತ್ರಕ್ಕೆ ಆಗಮಿಸಿದ ಶ್ರೀ ರಾಮ ಕ್ಷೇತ್ರ ಮಹಾ ಸಂಸ್ಥಾನ ಕನ್ಯಾಡಿಯ ಪೀಠಾಧಿಪತಿ, ೧೦೦೮ ಮಹಾ ಮಂಡಲೇಶ್ವರದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಆಶೀರ್ವಚನ ನೀಡಿ, ಮಾತೆ ದೇಯಿ ಬೈದೆತಿಯ ಕ್ಷೇತ್ರದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮಾತೆಯರು ಸೇರಿರುವುದು ನೋಡಿದಾಗ ಖುಷಿಯಾಗುತ್ತಿದೆ. ತಾಯಂದಿರಿಗೆ ಈ ಸಮಾಜವನ್ನು, ಸಂಸಾರವನ್ನು ತಿದ್ದುವ ಅದ್ಭುತ ಶಕ್ತಿ ಇದೆ. ತಾಯಂದಿರಿಂದಲೇ ಯಜ್ಞವನ್ನು ಕೂಡ ಮಾಡಿ ತೋರಿಸಿzವೆ. ಬಿಲ್ಲವರಿಗೆ ಇರುವ ಶಕ್ತಿಯನ್ನು ತೋರಿಸುವ ಕೆಲಸವನ್ನು ಗೆಜ್ಜೆಗಿರಿ ಮಾಡುತ್ತಿದೆ ಎಂಬುದು ಹೆಮ್ಮೆಯ ಸಂಗತಿಯಾಗಿದೆ. ನಾರಾಯಣ ಗುರುಗಳ ಸಿದ್ಧಾಂತದಂತೆ ಕೋಟಿ ಚೆನ್ನಯರ ಸಿದ್ಧಾಂತವನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಪ್ರಜ್ಞಾವಂತ ನಾಗರೀಕರಾಗಿ ಬದುಕೋಣ ಎಂದು ಹೇಳಿದರು.

LEAVE A REPLY

Please enter your comment!
Please enter your name here