ಬಳಂಜ: ಮಹಾವೀರ ನಿಲಯ ನಿವಾಸಿ ಯಶೋಧರ ಜೈನ್ ( 55 ವರ್ಷ) ಮಾ. 3ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಸ್ವಲ್ಪ ಸಮಯದಿಂದ ಅನಾರೋಗ್ಯದ ಬಳಲುತ್ತಿದ್ದರು. ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಮೃತರು ತಂದೆ ಚಿತ್ತರಂಜನ್ ಹೆಗ್ಡೆ, ಪತ್ನಿ ಸೌಮ್ಯ, ಇಬ್ಬರು ಗಂಡು ಮಕ್ಕಳು, ಸಹೋದರರು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ. ಇವರ ಪ್ರಾರ್ಥಿವ ಶರೀರ ಬೆಂಗಳೂರಿನಿಂದ ಈಗಾಗಲೇ ಹೊರಟಿದ್ದು ಇವರ ಅಂತಿಮ ದರ್ಶನ ಸಮಯ ಗಂಟೆ 5ರಿಂದ ಸ್ವಗೃಹದಲ್ಲಿ ನಡೆಯಲಿರುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.