ಕಲಾಪೋಷಕ ಟಿ. ಶ್ಯಾಮ್ ಭಟ್ ರವರಿಗೆ ಯಕ್ಷಭಾರತಿ ದಶಮಾನೋತ್ಸವ ಗೌರವ

0

ಬೆಳ್ತಂಗಡಿ: ಸಂಪಾಜೆ ಯಕ್ಷೋತ್ಸವದ ಸಂಘಟನೆ, ವಿವಿಧ ಕ್ಷೇತ್ರಗಳಲ್ಲಿ ಪರಿಣತರಾದ ಕಲಾವಿದ, ವಿದ್ವಾಂಸರಿಗೆ ಗೌರವ, ತಾಳಮದ್ದಳೆಗಳ ಆಯೋಜನೆ, ವಿದ್ಯಾರ್ಥಿಗಳಿಗೆ ಯಕ್ಷಗಾನ ಸ್ಪರ್ಧೆ, ಕಲಾವಿದರಿಗೆ ನೆರವು, ಶ್ರೀ ಎಡನೀರು ಮಠ ಮತ್ತು ಕೈರಂಗಳ ಕ್ಷೇತ್ರದಲ್ಲಿ ವಿಶೇಷ ಯಕ್ಷಗಾನ ಕಾರ್ಯಕ್ರಮಗಳು, ಸದಭಿರುಚಿಯ ಯಕ್ಷಗಾನ ಪ್ರದರ್ಶನ ನೀಡುವ ಮೇಳದ ಯಜಮಾನರಾಗಿ , ಕಲಾವಿದರ ಕಾಮಧೇನುವೆಂದು ಯಕ್ಷಗಾನ ವಲಯದಲ್ಲಿ ಪ್ರಸಿದ್ಧರಾದವರು ಟಿ. ಶ್ಯಾಮ್ ಭಟ್.

ಪ್ರಸ್ತುತ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಿವೃತ್ತ ಐ.ಎ.ಎಸ್ ಅಧಿಕಾರಿಯೂ ಆಗಿರುವ ಟಿ. ಶ್ಯಾಮ್ ಭಟ್ ಯಕ್ಷಗಾನ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಯಕ್ಷ ಭಾರತಿ ಬೆಳ್ತಂಗಡಿ ಸಂಸ್ಥೆಯ ದಶಮಾನೋತ್ಸವದ ಗೌರವ ಸನ್ಮಾನವನ್ನು ಪ್ರದಾನ ಮಾಡಲಾಯಿತು.

ಗೌರವ ಸ್ವೀಕರಿಸಿದ ಶ್ಯಾಮ್ ಭಟ್ ಅವರು ಯಕ್ಷ ಭಾರತಿ ಬೆಳ್ತಂಗಡಿ ನಡೆಸುತ್ತಿರುವ ಯಕ್ಷಗಾನ ಚಟುವಟಿಕೆಗಳು, ಆರೋಗ್ಯ ಸೇವೆ, ಸಂಸ್ಕಾರ ಶಿಕ್ಷಣದಿಂದ ಬೆಳ್ತಂಗಡಿ ತಾಲೂಕಿನಲ್ಲಿ ಮಾತ್ರವಲ್ಲವೇ ಅನ್ಯ ಪ್ರದೇಶಗಳಲ್ಲಿ ಕೂಡ ಮೆಚ್ಚುಗೆಯಿದೆಯೆಂದು ಸಂತಸ ವ್ಯಕ್ತಪಡಿಸಿ ಶುಭಹಾರೈಸಿದರು.

ಸಂಪಾಜೆಯ ಅವರ ನಿವಾಸದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಯಕ್ಷ ಭಾರತಿ ಅಧ್ಯಕ್ಷ ರಾಘವೇಂದ್ರ ಬೈಪಡಿತ್ತಾಯ ಉಜಿರೆ, ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ, ಟ್ರಸ್ಟಿ ಹರೀಶ್ ರಾವ್ ಮುಂಡ್ರುಪ್ಪಾಡಿ , ಸಂಚಾಲಕ ಮಹೇಶ್ ಕನ್ಯಾಡಿ, ದಶಮಾನೋತ್ಸವ ಸಮಿತಿಯ ಅಧ್ಯಕ್ಷ ರವೀಂದ್ರ ಶೆಟ್ಟಿ ಬಳೆಂಜ ಮತ್ತು ಮರಳಿ ಕೃಷ್ಣ ಆಚಾರ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here