ಬೆಳ್ತಂಗಡಿ: ಮರೋಡಿ ಶ್ರೀ ದೈವ ಕೊಡಮಣಿತ್ತಾಯ, ಶ್ರೀ ವ್ಯಾಘ್ರಚಾಮುಂಡಿ ದೈವಸ್ಥಾನ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದಲ್ಲಿ ಜೀರ್ಣೋದ್ಧಾರ ಕೆಲಸ ಕಾರ್ಯಗಳು ಭರದಿಂದ ಸಾಗುತ್ತಿದೆ. ಈ ನಿಟ್ಟಿನಲ್ಲಿ ದೈವಸ್ಥಾನ ಹಾಗು ಗರಡಿಯ ವಿವಿಧ ಕಾಮಗಾರಿಗಳಿಗೆ ಬೇಕಾದ ಮರ ಮೂಹೂರ್ತವನ್ನು ಫೆ.16ರಂದು ಪೊಸರಡ್ಕ ಕ್ಷೇತ್ರದಲ್ಲಿ ಆಡಳಿತ ಸಮಿತಿ ಹಾಗು ಗ್ರಾಮಸ್ಥರ ಸಮ್ಮುಖದಲ್ಲಿ ನೆರವೇರಿಸಲಾಯಿತು.
ಈಗಾಗಲೇ ಶೇ. 50ರಷ್ಟು ಜಿರ್ಣೋದ್ಧಾರ ಪೂರ್ಣಗೊಂಡಿದ್ದು, ಊರ ಪರ ಪರವೂರ ಭಕ್ತರು, ದಾನಿಗಳು ಹಾಗು ಸರಕಾರ ಸಹಕಾರದೊಂದಿಗೆ ಅತೀ ಶೀಘ್ರದಲ್ಲಿ ಕ್ಷೇತ್ರದ ಬ್ರಹ್ಮಕುಂಭಾಭಿಷೇಕ ಸಂಭ್ರಮ ನಡೆಸಲು ನಿರ್ಧರಿಸಲಾಗಿದೆ.