ಬಳಂಜ: ಬಳಂಜದಲ್ಲಿ ಟಿಪ್ಪರ್ ಲಾರಿ ಪತ್ತೆಯಾದ ಘಟನೆ ಫೆ.17ರಂದು ನಡೆದಿದೆ. ಯಾರೋ ಅಪರಿಚಿತರು ಕದ್ದು ತಂದು ಬಳಂಜದಲ್ಲಿ ಟಿಪ್ಪರ್ ನಿಲ್ಲಿಸಿರಬಹುದು ಎಂದು ಶಂಕಿಸಲಾಗಿದೆ. ಸ್ಥಳೀಯರಾದ ಹರೀಶ್ ವೈ. ಚಂದ್ರಮ ಮತ್ತು ಸದಾನಂದ ತೋಟದಪಲ್ಕೆ ಅವರು ಟಿಪ್ಪರ್ ಲಾರಿ ಕಂಡು ಬಂದಿರುವ ಬಗ್ಗೆ ವೇಣೂರು ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.