ಚಾಣಕ್ಯ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಮಹಿಳಾ ಒಕ್ಕೂಟದ ವಾರ್ಷಿಕ ಮಹಾಸಭೆ

0

ಅಳದಂಗಡಿ: ಫೆ.11ರಂದು ಚಾಣಕ್ಯ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಮಹಿಳಾ ಒಕ್ಕೂಟ ಇದರ 2023 -2024ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಒಕ್ಕೂಟದ ಅಧ್ಯಕ್ಷೆ ಭಾರತಿ ಅಧ್ಯಕ್ಷತೆಯಲ್ಲಿ ಸರ್ವ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಸಭೆಯನ್ನು ನಡೆಸಲಾಯಿತು.

ಒಕ್ಕೂಟದ ಅಧ್ಯಕ್ಷರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಎಮ್. ಬಿ. ಕೆ ಹರ್ಷಲಾ ಒಕ್ಕೂಟದ ವಾರ್ಷಿಕ ವರದಿ ಮಂಡನೆ ಹಾಗೂ ಒಕ್ಕೂಟದ ಜಮಾ ಖರ್ಚುನ್ನು ಮಂಡಿಸಿ, ಅನುಮೋದನೆಯನ್ನು ಪಡೆಯಲಾಯಿತು.

ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ ಮೇಡಂ ಸಭೆಯನ್ನು ಉದ್ದೇಶಿಸಿ ಮಾತಾನಾಡಿದರು. ತಾಲೂಕು ಬ್ಲಾಕ್ ಮ್ಯಾನೇಜರ್ ನಿತೇಶ್ ಒಕ್ಕೂಟದ ವಾರ್ಷಿಕ ಮಹಾಸಭೆ ಬಗ್ಗೆ, ಕೃಷಿ ಹಾಗೂ ಕೃಷಿಯೇತರ ಚಟುವಟಿಕೆಗಳ ಬಗ್ಗೆ ಹಲವಾರು ಮಾಹಿತಿಗಳನ್ನು ನೀಡಿದರು. ತಾಲೂಕು ವಲಯ ಮೇಲ್ವಿಚಾರಕ ಸ್ವಸ್ತಿಕ್ ವಾರ್ಷಿಕ ಮಹಾಸಭೆಯ ಉದ್ದೇಶ ಮತ್ತು ಜವಾಬ್ದಾರಿಯ ಬಗ್ಗೆ ವಿಸ್ತಾರವಾದ ಮಾಹಿತಿಯನ್ನು ನೀಡಿದರು.

ನಿರ್ಗಮಿತ ಪದಾಧಿಕಾರಿಗಳಿಗೆ ಸ್ಮರಣಿಕೆ ನೀಡಿ, ಗೌರವಿಸಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಒಕ್ಕೂಟದ ಜವಾಬ್ದಾರಿಯನ್ನು ಹಸ್ತಾಂತರಿಸಲಾಯಿತು. ನಿರ್ಗಮಿತ ಪದಾಧಿಕಾರಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ವಾರ್ಷಿಕ ಸಭೆಯ ಕೊನೆಯಲ್ಲಿ ಒಕ್ಕೂಟದ ಅಧ್ಯಕ್ಷೆ ಭಾರತಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು ಹಾಗೂ ಹಲವರು ಮಾಹಿತಿಗಳನ್ನು ತಿಳಿಸಿದರು. ಶುಭಲಕ್ಷ್ಮಿ ಸಂಜೀವಿನಿ ಗುಂಪಿನ ಅಧ್ಯಕ್ಷೆ ಸ್ವಾತಿ ನಿರೂಪಣೆ ಮಾಡಿ,ಎಲ್.ಸಿ.ಆರ್.ಪಿ ಆಶಾ ಸ್ವಾಗತಿಸಿದರು. ಕೃಷಿ ಸಖಿ ಜಾನೆಟ್ ಡಿ ಸೋಜಾ ಧನ್ಯವಾದ ನೀಡಿ ಕಾರ್ಯಕ್ರಮವನ್ನು ಮುಗಿಸಲಾಯಿತು.

LEAVE A REPLY

Please enter your comment!
Please enter your name here