

ಬೆಳ್ತಂಗಡಿ: “ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ವಿಶ್ವಕ್ಕೆ ಮಾದರಿ,” ಎಂದು ಪೆನ್ಸಿಲ್ವೇನಿಯ ಯುನಿವರ್ಸಿಟಿ ಹಿರಿಯ ಪ್ರೊಫೆಸರ್ ಫೆಮಿಡಾಹಂಡಿ ಅಭಿಪ್ರಾಯಪಟ್ಟರು.
ಪೆನ್ಸಿಲ್ವೇನಿಯ ಯುನಿವರ್ಸಿಟಿಯ 12 ಮಂದಿ ವಿದ್ಯಾರ್ಥಿಗಳ ತಂಡವು ಯುನಿವರ್ಸಿಟಿಯ ಹಿರಿಯ ಪ್ರೊಫೆಸರ್ ಫೆಮಿಡಾಹಂಡಿ ಮತ್ತು ನಿಟ್ಟೆಯ ವಿನೋದ್ ದೀಕ್ಷಿತ್ ನೇತೃತ್ವದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ಭೇಟಿ ನೀಡಿ ಅಧ್ಯಯನ ನಡೆಸಿತು.
ಮೊದಲ ದಿನ ಪ್ರಗತಿಬಂಧು ಸಂಘ, ಮಹಿಳಾ ಸ್ವಸಹಾಯ ಸಂಘ, ಮಾದರಿ ಕೃಷಿಕರು, ಒಕ್ಕೂಟ ವ್ಯವಸ್ಥೆ ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದ ಬಗ್ಗೆ ಉಡುಪಿ ತಾಲೂಕಿನಲ್ಲಿ ಅಧ್ಯಯನ ನಡೆಸಿ ಮೆಚ್ಚುಗೆ ವ್ಯಕ್ತಪಡಿಸಿದರು.
2ನೇ ದಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಅಧ್ಯಕ್ಷ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದ ಅಧ್ಯಕ್ಷೆ ಹೇಮಾವತಿ ವೀ. ಹೆಗ್ಗಡೆ ಯವರನ್ನು ಭೇಟಿ ಮಾಡಿ ಯೋಜನೆಯ ಪ್ರಸ್ತುತ ಕಾರ್ಯಕ್ರಮಗಳ ಬಗ್ಗೆ ಮಾರ್ಗದರ್ಶನ ಪಡೆದು ಕೊಂಡರು. ಯೋಜನೆಯ ಕೇಂದ್ರ ಕಚೇರಿಗೆ ಭೇಟಿ ನೀಡಿ ಸಂಸ್ಥೆಯ ಸಿಇಒ ಅನಿಲ್ ಕುಮಾರ್ ಎಸ್.ಎಸ್. ಪೆನ್ಸಿಲ್ವೇನಿಯ ಯುನಿವರ್ಸಿಟಿಯ ಅಧ್ಯಯನ ತಂಡವು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಚೇರಿಗೆ ಭೇಟಿ ನೀಡಿತು.
ಅವರಿಂದ ಯೋಜನೆಯಲ್ಲಿರುವ ಕಾರ್ಯಕ್ರಮಗಳು, ಯೋಜನೆಯು ಗ್ರಾಮೀಣಾಭಿವೃದ್ಧಿಯಲ್ಲಿ ವಹಿಸಿ ರುವ ಪಾತ್ರ, ಸಮುದಾಯ ಅಭಿವೃದ್ಧಿ ಕಾರ್ಯ ಕ್ರಮಗಳ ಅನುಷ್ಠಾನದಿಂದ ಗ್ರಾಮಗಳಲ್ಲಾದ ಬದಲಾವಣೆಯ ಬಗ್ಗೆ ಹಾಗೂ ಸರ್ವತೋಮುಖ ಅಭಿವೃದ್ಧಿಯ ದೃಷ್ಟಿಕೋನದಲ್ಲಿ ಯೋಜನೆಯು ನೀಡಿದ ಕೊಡುಗೆಯ ಬಗ್ಗೆ ಮಾಹಿತಿ ಪಡೆದುಕೊಂಡರು.
ಉಗ್ರಾಣ ಕಾರ್ ಮ್ಯೂಸಿಯಂಗೆ ಭೇಟಿ ನೀಡಿದ ತಂಡಕ್ಕೆ ಕ್ಷೇಮವನದ ಸಿಇಒ ಶ್ರದ್ಧಾ ಅಮಿತ್ ಮಾಹಿತಿ ನೀಡಿದರು. ತಂಡದ ನಿರ್ವಹಣೆಯನ್ನು ಮಾನವ ಸಂಪನ್ಮೂಲ ವಿಭಾಗದ ಯೋಜನಾಧಿಕಾರಿ ಶ್ರೀನಿವಾಸ ಪಿ. ನಡೆಸಿದರು.