

ಬೆಳ್ತಂಗಡಿ: ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಕರ್ನಾಟಕ ವತಿಯಿಂದ ಉಡುಪಿ ಜಿಲ್ಲೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಆಮಂತ್ರಣ ಬರಹಗಾರರಿಗೆ ಜಿಲ್ಲಾ ಮಟ್ಟದ ವಿವಿಧ ಆಕರ್ಷಕ ರೀತಿಯ ರಸಪ್ರಶ್ನೆ ಫೆ.11ರಂದು ನಡೆಸಲಾಗಿತ್ತು.
ಸರೀನ್ ತಾಜ್ ಕಾಶಿಪಟ್ಣ ಪ್ರಥಮ, ಮಂಜುನಾಥ ಗುಂಡ್ಮಿ ಬ್ರಹ್ಮಾವರ ದ್ವಿತೀಯ ಹಾಗೂ ಉಮಾ ಸುನಿಲ್ ಹಾಸನ ತೃತೀಯ ಸ್ಥಾನಿಗಳಾಗಿ ವಿಜೇತರಾಗಿದ್ದಾರೆ. ಸುಶ್ಮಿತಾ ಆರ್. ಮೂಡಬಿದ್ರೆ, ಶ್ವೇತಾ ಗೋಡ್ ಬೋಲೆ ಕನ್ಯಾಡಿ, ಕಸ್ತೂರಿ ಜಯರಾಮ್ ಕಾವೂರು, ಅನ್ನಪೂರ್ಣ ಅಂಬಲಪಾಡಿ, ರೇವತಿ ಪಿ. ಜೈನ್ ಭಟ್ಕಳ, ಮೆಚ್ಚುಗೆ ಗಳಿಸಿದ್ದಾರೆ.
ಸ್ಪರ್ಧೆಯನ್ನು ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ರಾಜ್ಯ ಸದಸ್ಯರಾದ ಆಶಾ ಅಡೂರು ಮತ್ತು ಆಮಂತ್ರಣ ಪರಿವಾರದ ವಿಜಯ ಕುಮಾರ್ ಜೈನ್ ಅಳದಂಗಡಿ ನಡೆಸಿಕೊಟ್ಟರು.