

ಉಜಿರೆ: ಕರ್ಮ, ಕಾಯಕ ಕಲ್ಪನೆಯ ಜ್ಞಾನದೇಗುಲ ನಮ್ಮ ಸಂಸ್ಥೆ. ಈ ಸಂಸ್ಥೆಯ ಒಂದು ಶಾಖೆಯಾಗಿರುವ ನೀವುಗಳು ಮುಂದೆ ಸಂಸ್ಥೆಯ ರಾಯಭಾರಿಗಳಾಗಿ, ಉನ್ನತ ವ್ಯಾಸಂಗ, ಉನ್ನತ ಹುದ್ದೆ, ಉತ್ತಮ ಮೌಲ್ಯಯುತ ಬದುಕು ನಡೆಸುವ ಮೂಲಕ ಶ್ರದ್ದೆ, ಬದ್ಧತೆ, ಪ್ರಾಮಾಣಿಕತೆ ಮೈಗೂಡಿಸಿಕೊಳ್ಳಿ. ಶಿಸ್ತು, ಸಾಧನೆಯ ಮೂಲಕ ಆಸೆಯ ಬದುಕು ತೊರೆದು ಆದರ್ಶ ಬದುಕನ್ನು ನಿಮ್ಮದಾಗಿಸಿಕೊಳ್ಳಿಯೆಂದು
ಸಂಸ್ಥೆಯ ನಿವೃತ್ತ ಕ್ಷೇಮ ಪಾಲನಾಧಿಕಾರಿ ಶ್ರೀ ಸೋಮಶೇಖರ್ ಶೆಟ್ಟಿ ಹೇಳಿದರು.
ಶಿಕ್ಷಣದ ಮೂಲಕ ಯೋಗವು ಯೋಗ್ಯತೆಯು ಲಭಿಸುವುದು. ಸ್ಪರ್ಧಾತ್ಮಕ ಜಗತ್ತಿನಲ್ಲಿ ಈಜಿ ದಡ ಸೇರಲು ಬಹಳ ಪ್ರಾಯಸ ಪಡಬೇಕಿದೆ, ಹಾಗಾಗಿ ಶ್ರದ್ದೆಯಿಂದ ಭಕ್ತಿಯಿಂದ ಕಲಿಕೆಯಲ್ಲಿ ತೊಡಗಿಸಿಕೊಂಡು, ಯಶಸ್ಸು ಪಡೆಯಿರಿ ಎಂದು ಕಾಲೇಜಿನ ಪ್ರಾಂಶುಪಾಲ ಸುನಿಲ್ ಪಂಡಿತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಶುಭ ಹರಸಿದರು.
ವಿದ್ಯಾರ್ಥಿಗಳು ಭಾವನಾತ್ಮಕವಾಗಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಬೋಧಕ, ಬೋಧಕೇತರ ಎಲ್ಲಾ ಸಿಬ್ಬಂದಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಜೀವಶಾಸ್ತ್ರ ವಿಭಾಗದ ಮುಖ್ಯಸ್ಥೆ ವಾಣಿ ಎಂ. ಎಂ. ಹಾಗೂ ದೈಹಿಕ ಶಿಕ್ಷಕ ಲಕ್ಷ್ಮಣ್ ಜಿ. ಡಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಗಣಿತ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪ್ರಥಮ ಪಿ.ಯು.ಸಿ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಸಂಸ್ಕೃತ ಉಪನ್ಯಾಸಕ ಮಹೇಶ್ ಎಸ್. ಎಸ್. ಸ್ವಾಗತಿಸಿ, ನಿರೂಪಿಸಿದರು. ಕಾಲೇಜಿನ ಗಣಕಶಾಸ್ತ್ರ ಉಪನ್ಯಾಸಕ ಪವಿತ್ರ ಕುಮಾರ್ ಧನ್ಯವಾದ ಸಮರ್ಪಿಸಿದರು.