




ಬೆಳ್ತಂಗಡಿ: ಪಟ್ರಮೆ ಗ್ರಾಮದ ಪಟ್ಟೂರಿನಲ್ಲಿ ಕಾರಿನಲ್ಲಿ ಮೂರು ದನದ ಕರುಗಳನ್ನು ಸಾಗಾಟ ಮಾಡುತ್ತಿದ್ದ ಸಂದರ್ಭದಲ್ಲಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳ ಠಾಣಾ ಪೊಲೀಸರು ಓರ್ವ ಆರೋಪಿಯ ಮನೆಯನ್ನು ಮುಟ್ಟುಗೋಲು ಹಾಕಿದ್ದಾರೆ. ಉಳ್ಳಾಲ ತಾಲೂಕಿನ ಖಲೀಲ್ ಯಾನೆ ತೌಸೀಫ್ (38) ಹಾಗೂ ಮಹಮ್ಮದ್ ಸಿನಾನ್ (25) ಪ್ರಕರಣದ ಆರೋಪಿಗಳಾಗಿದ್ದು ಇವರ ಪೈಕಿ ಸಜೀಪನಡು ಗ್ರಾಮದ ತಂಚಿಬೆಟ್ಟುನಲ್ಲಿರುವ ಖಲೀಲ್ ಯಾನೆ ತೌಸೀಫ್ ಮನೆಯಲ್ಲಿ ದನವನ್ನು ಮಾಂಸ ಮಾಡಲಾಗುತ್ತಿದ್ದ ಹಿನ್ನೆಲೆಯಲ್ಲಿ ಈತನ ಮನೆಯನ್ನು ಮುಟ್ಟುಗೋಲು ಹಾಕಲಾಗಿದೆ. ಮನೆಯನ್ನು ಮುಟ್ಟುಗೋಲು ಹಾಕುವುದಕ್ಕೆ ಪೊಲೀಸರು ಸಹಾಯಕ ಕಮಿಷನರ್ ಅವರಿಗೆ ವಿನಂತಿಸಿದ್ದರು. ಅವರ ಆದೇಶದಂತೆ ಮುಟ್ಟುಗೋಲು ಕಾರ್ಯ ನಡೆಸಲಾಗಿದೆ.









