


ಧರ್ಮಸ್ಥಳ: ಗ್ರಾಮದ ನೀರಚಿಲುಮೆ ಎಂಬಲ್ಲಿ ವೀಲ್ ಚೇರ್ ಮೇಲೆ ಕುಳಿತುಕೊಂಡು ಎಳನೀರು ವ್ಯಾಪಾರ ಮಾಡುತ್ತಿರುವ ಜಗದೀಶ್ ನಾಯ್ಕ ಎಂಬವರಿಗೆ ಧರ್ಮಸ್ಥಳದ ಸಿ.ಎ. ಬ್ಯಾಂಕ್ ಆಡಳಿತ ಮಂಡಳಿ ನೆರವಾಗಿದೆ.


ಆಕಸ್ಮಿಕ ಅವಘಡವೊಂದರಲ್ಲಿ ತನ್ನ ಸೊಂಟದ ಕೆಳಗಿನ ಶಕ್ತಿಯನ್ನೇ ಕಳೆದುಕೊಂಡರೂ ಕೂಡಾ ಛಲ ಬಿಡದ ತ್ರಿವಿಕ್ರಮನಂತೆ ಸ್ವಾಭಿಮಾನದ ಬದುಕು ಕಟ್ಟಿಕೊಂಡು ಸಣ್ಣ ವ್ಯಾಪಾರ ಮಾಡಿಕೊಂಡು ಬದುಕು ಕಟ್ಟಿಕೊಂಡ ಜೀವ ಅದು. ಇವರ ವಿಷಯಗಳ ಬಗ್ಗೆ ಶ್ಯಾಮ್ ಪ್ರಸಾದ್ ಮತ್ತು ಶೈನಿ ಕಾಮತ್ ದಂಪತಿಯ ‘ರೈಡಿಂಗ್ ಜೋಡಿಗಳು’ ಎಂಬ ಯೂಟ್ಯೂಬ್ ನಲ್ಲಿ ಕಳೆದ ಕೆಲ ತಿಂಗಳ ಹಿಂದೆ ಪ್ರಸಾರ ಮಾಡಿದ್ದರು. ಈ ವಿಡಿಯೋ ಎಲ್ಲಾ ಕಡೆ ವೈರಲ್ ಆಗಿತ್ತು. ಬಳಿಕ ಬೆಳ್ತಂಗಡಿ ಶಾಸಕ ಹರೀಶ್ ಪೂಂಜರು ಜಗದೀಶ್ ಅವರ ವ್ಯಾಪಾರಕ್ಕೆ ಮಳೆಗಾಳಿಗಳಿಂದ ತೊಂದರೆಯಾಗದಂತೆ ಸೂಕ್ತ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಧರ್ಮಸ್ಥಳ ಸಿ.ಎ. ಬ್ಯಾಂಕ್ ಅಧ್ಯಕ್ಷ ಪ್ರೀತಮ್ ಅವರನ್ನು ಸಂಪರ್ಕಿಸಿ ಏನಾದರೂ ವ್ಯವಸ್ಥೆ ಮಾಡುವಂತೆ ತಿಳಿಸಿದ್ದರು.









