

ಅಳದಂಗಡಿ: ಚಾಣಕ್ಯ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಮಹಿಳಾ ಒಕ್ಕೂಟ ಇದರ ವಾರ್ಷಿಕ ಮಹಾಸಭೆಯಲ್ಲಿ, ಒಕ್ಕೂಟ ದಡಿಯಲಿ ರಚನೆಯಾದ ಸಹನಾ ಸಂಜೀವಿನಿ ಗುಂಪಿನ ಸದಸ್ಯರಾದ ಮೈಮುನ ಮನೆಯಲ್ಲಿಯೇ ತಯಾರಿಸಿದಂತಹ ಸಹನಾ ಸಂಜೀವಿನಿ ಸೋಪ್ ಆಯಿಲ್ ಅನ್ನು ಮಹಾಸಭೆ ವೇದಿಕೆಯಲ್ಲಿ ಬಿಡುಗಡೆ ಮಾಡಲಾಯಿತು.
ಹಾಗೂ ದೀಪಶ್ರೀ ಶಕ್ತಿ ಗುಂಪಿನ ಸದಸ್ಯೆ ಪ್ರೇಮ ಜೈನ್ ಮನೆಯಲ್ಲಿಯೇ ತಯಾರಿಸಿದ ಕಷಾಯ ಹುಡಿಯನ್ನು ಮಹಾಸಭೆಯ ವೇದಿಕೆಯಲ್ಲಿ ಬಿಡುಗಡೆ ಮಾಡಲಾಯಿತು. ಲಕ್ಷ್ಮಿ ಸಂಜೀವಿನಿ ಗುಂಪಿನ ಸದಸ್ಯೆ ಶಾಲಿನಿ ಜೈನ್ ಮನೆಯಲ್ಲಿ ತಯಾರಿಸಿದಂತಹ ಮಾವಿನ ಉಪ್ಪಿನಕಾಯಿ ಫೆ. 11ರಂದು ಮಹಾಸಭೆಯ ವೇದಿಕೆಯಲ್ಲಿ ಬಿಡುಗಡೆ ಮಾಡಲಾಯಿತು.