ಹೊಸ ಬೆಳಕು ಒಕ್ಕೂಟದಿಂದ ಕೃಷಿ ತರಬೇತಿ

0

ಬೆಳ್ತಂಗಡಿ: ಹೊಸ ಬೆಳಕು ಒಕ್ಕೂಟ ಹಾಗೂ ಜಿಲ್ಲಾ ಕೃಷಿ ತರಬೇತಿ ಕೇಂದ್ರ ಬೆಳ್ತಂಗಡಿ ಇದರ ಸಹಯೋಗದೊಂದಿಗೆ 45 ಸದಸ್ಯರಿಗೆ ಅಣಬೆ ಮತ್ತು ಮಲ್ಲಿಗೆ ಕೃಷಿ ತರಬೇತಿಯನ್ನು ಫೆ. 9ರಂದು 9.30 ಗಂಟೆಗೆ ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ಹೊಸ ಬೆಳಕು ಒಕ್ಕೂಟದ ಗೌರವಾಧ್ಯಕ್ಷ ವಾಲ್ಟರ್ ಡಿಮೆಲ್ಲೊ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಪ್ರಾರ್ಥನೆ ಗೀತೆಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಿದೆವು. ಈ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೊಸ ಬೆಳಕು ಒಕ್ಕೂಟದಗೌರವಾಧ್ಯಕ್ಷ ಫಾ! ವಾಲ್ಟರ್ ಡಿಮೆಲ್ಲೊ ವಹಿಸಿದ್ದರು.

ಮುಖ್ಯ ಅತಿಥಗಳಾಗಿ ಹೋಲಿ ರಿಡೀಮರ್ ಆಂಗ್ಲಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಫಾ! ಕ್ಲಿಫರ್ಡ್ ಪಿಂಟೋ ಚರ್ಚ್ ಪಾಲನಾ ಮಂಡಳಿಯ ಉಪಾದ್ಯಕ್ಷ ವಾಲ್ಟರ್ ಮೋನಿಸ್ ಹಾಗೂ ಕಾರ್ಯದರ್ಶಿಯ ಗಿಲ್ಬರ್ಟ್ ಪಿಂಟೊ ಹಾಗೂ ಅಣಬೆ ಸಂಪನ್ಮೂಲ ವ್ಯಕ್ತಿಗಳಾಗಿ ಬಂದ ಅಣಬೆ ಕೃಷಿ ತರಬೇತಿದಾರರಾದ ಸುಲೇಮಾನ್ ಬೆಳಾಲ್ ಒಕ್ಕೂಟ ಅಧ್ಯಕ್ಷ, ವಿನ್ಸೆಂಟ್ ಲೋಬೋ ಕಾರ್ಯದರ್ಶಿ ಪೌಲಿನ್ ರೇಗೊ ರವರ ಸಮ್ಮುಖದಲ್ಲಿ ಈ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.

ಹೊಸ ಬೆಳಕು ಒಕ್ಕೂಟದ ಗೌರವಾಧ್ಯಕ್ಷ ಫಾ! ವಾಲ್ಟರ್ ಡಿಮೆಲ್ಲೊ ಮಾತನಾಡಿ ಕೃಷಿ ಬೆಳೆಯಲ್ಲಿ ಅನೇಕ ಮಿಶ್ರ ಕೃಷಿಯನ್ನು ಮಾಡಿದಾಗ ಮಾತ್ರ ಯಶಸ್ಸು ಪಡೆಯಲು ಸಾಧ್ಯ. ಅಡಿಕೆ ಬೆಳೆ ರೋಗಗಳಿಂದ ನಶಿಸುವ ಈ ಸಂದರ್ಭದಲ್ಲಿ ಪರ್ಯಾಯ ಕೃಷಿಯನ್ನು ಮಾಡಿ ಲಾಭಾಂಶ ಮಾಡಿ ಉತ್ತಮ ಜೀವನ ಮಾಡ ಬಹುದು ಎಂದರು. ಹಾಗಾಗಿ ಇಂದಿನ ಅಣಬೆ ಮತ್ತು ಮಲ್ಲಿಗೆ ಕೃಷಿ ತರಬೇತಿ ನಿಮಗೆ ಉಪಯುಕ್ತ ವಾಗಲಿ ಯಶಸ್ವಿಯಾಗಲಿ ಎಂದು ಶುಭಹಾರೈಸಿದರು.

ಸುಲೇಮಾನ್ ಬೆಳಾಲು ಅವರು, ಅಣಬೆ ಕೃಷಿ ಮಾಡುವಬಗ್ಗೆ ಪಾತ್ರ್ಯಕ್ಷತೆ ತೋರಿಸಿ ಅಣಬೆ ಕೃಷಿಯ ಉತ್ತಮ ತರಬೇತಿಯನ್ನು ನೀಡಿದರು.

ಪ್ರಭಾಕರ್ ಮಲ್ಯ ಇವರು ಮಲ್ಲಿಗೆ ಕೃಷಿ ಹೇಗೆ ಮಾಡಬೇಕು, ಅದರಿಂದ ಹೇಗೆ ಲಾಭ ಪಡೆಯುವುದು ಇದರ ಬಗ್ಗೆ ಒಳ್ಳೆಯ ಮಾಹಿತಿ ನೀಡಿದರು.

ನಂತರ ಜಿಲ್ಲಾ ಕೃಷಿ ಕೇಂದ್ರದ ಅಧಿಕಾರಿ ಗಣೇಶ್ ಭಟ್ಟ ಕೃಷಿ ತರಬೇತಿ ಕೇಂದ್ರದಿಂದ ಅನೇಕ ಜನರಿಗೆ ಅನೇಕ ಕೃಷಿ ತರಬೇತಿ ಗಳನ್ನು ಕೊಟ್ಟು ಕ ಅದರ ಪ್ರಯೋಜನವನ್ನು ಪಡೆದು ಕೊಳ್ಳುವಂತೆ ಎಲ್ಲರಿಗೂ ಮಾರ್ಗದರ್ಶನವನ್ನು ನೀಡಿದರು..

ತರಬೇತಿಗೆ ಬಂದ ಎಲ್ಲಾರಿಗೂ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು. ಇಂದಿನ ಕಾರ್ಯಕ್ರಮದ ಕಾರ್ಯನಿರೂಪಣೆಯನ್ನು ವಾಲ್ಟರ್ ಮೋನಿಸ್ ನಡೆಸಿಕೊಟ್ಟರು. ಸ್ವಾಗತವನ್ನು ಒಕ್ಕೂಟ ಅಧ್ಯಕ್ಷ ವಿನ್ಸೆಂಟ್ ಲೋಬೊ ಹಾಗೂ ಧನ್ಯವಾದ ಒಕ್ಕೂಟ ಕಾರ್ಯದರ್ಶಿ ಪೌಲಿನ್ ರೇಗೊ ನೀಡಿದರು.

LEAVE A REPLY

Please enter your comment!
Please enter your name here