

ಬೆಳ್ತಂಗಡಿ: ದೇಯಿ ಬೈದೆದಿ ಕೋಟಿ ಚೆನ್ನಯ ಮೂಲ ಸ್ಥಾನ ಶ್ರೀ ಕ್ಷೇತ್ರ ಗೆಜ್ಜೆ ಗಿರಿಯಲ್ಲಿ ಮಾರ್ಚ್ 1 ರಿಂದ 5ರ ತನಕ ನಡೆಯುವ ವಾರ್ಷಿಕ ಜಾತ್ರಾ ಮಹೋತ್ಸವವನ್ನು ಯಶಸ್ಸು ಗೊಳಿಸುವ ಬಗ್ಗೆ ಬೆಳ್ತಂಗಡಿ ತಾಲೂಕಿನ ಶಿಶಿಲ ಹಾಗೂ ಶಿಬಾಜೆ ಗ್ರಾಮಗಳ ಶ್ರೀ ಕ್ಷೇತ್ರ ಗೆಜ್ಜೆ ಗಿರಿಯ ಭಕ್ತಾಭಿಮಾನಿಗಳ ಸಮಾಲೋಚನ ಸಭೆಯನ್ನು ಫೆ. 9ರಂದು ಸಂಜೆ ಗಂಟೆ 5.30ಕ್ಕೆ ಆಯೋಜಿಸಲಾಗಿತ್ತು.
ಸಭೆಯ ಅಧ್ಯಕ್ಷತೆಯನ್ನು ಬ್ರಹ್ಮ ಭೈದರ್ಕಳ ಗರಡಿ ಶ್ರೀ ಕ್ಷೇತ್ರ ಓಟ್ಲ ಇಲ್ಲಿನ ಧರ್ಮದರ್ಶಿಯವ ಜನಾರ್ದನ ಬಂಗೇರ ವಹಿಸಿಕೊಂಡು ಜಾತ್ರೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ದರು. ಶ್ರೀ ಕ್ಷೇತ್ರ ಗೆಜ್ಜಗಿರಿ ಜಾತ್ರೆೋತ್ಸವ ಸಮಿತಿಯ ಧರ್ಮಸ್ಥಳ ವಲಯ ಸಂಚಾಲಕ ರೂಪೇಶ್ ಧರ್ಮಸ್ಥಳ ಶ್ರೀ ಕ್ಷೇತ್ರದಲ್ಲಿ ನಡೆಯುವ ಮಡಿಲು ಸೇವೆ ಯ ಮಾಹಿತಿ ನೀಡಿದರು.
ಜಾತ್ರೋತ್ಸವದ ಮಾಹಿತಿಯನ್ನು ಸಭೆಗೆ ವಲಯ ಸಂಚಾಲಕ ಸಂತೋಷ್ ಉಪ್ಪಾರ್ ನೀಡಿ ಗ್ರಾಮಗಳ ಎಲ್ಲಾ ಭಕ್ತಾಭಿಮಾನಿಗಳನ್ನು ಜಾತ್ರೋತ್ಸವಕ್ಕೆ ಆಮಂತ್ರಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಶಿಶಿಲದ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ವಸಂತಗೌಡ , ಶಿವರಾಮ ಪೂಜಾರಿ, ರತನ್ ಉಪ್ಪಾರು, ಎಲ್ಯಣ್ಣ ಪೂಜಾರಿ ಬೂಡುಜಾಲು, ಕೇಶವ ಗೌಡ, ಅಶೋಕ್ ಬಂಗೇರ ಓಟ್ಲಾ, ರಮೇಶ್ ಬಂಗೇರ ಒಟ್ಲ ಹಾಗೂ ಓಟ್ಲಾ ಗರಡಿಯ ಜಾತ್ರೋತ್ಸವ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ವಲಯ ಸಂಚಾಲಕ ಪುರುಷೋತ್ತಮ ಪೂಜಾರಿ ಧರ್ಮಸ್ಥಳ ಸ್ವಾಗತಿಸಿ, ಕಾರ್ಯಕ್ರಮವನ್ನು ಸಂಘಟಿಸಿದ್ದರು. ರಮೇಶ್ ಬಂಗಿಯರವರ ಧನ್ಯವಾದದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.