

ಉಜಿರೆ: ಬೆನಕ ಹೆಲ್ತ್ ಸೆಂಟರ್ ಮಲ್ಟಿ ಸ್ಪೆಷಲ್ ಆಸ್ಪತ್ರೆ ಇದರ ರಜತ ಸಂಭ್ರಮ ಮತ್ತು ನವಿಕೃತ ಕಟ್ಟಡದ ಉದ್ಘಾಟನೆ ಜ. 18ರಂದು ನಡೆಯಿತು.
ರಾಜ್ಯ ಸರಕಾರದ ಕುಟುಂಬ ಕಲ್ಯಾಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಕಾರ್ಯಕ್ರಮ ಉದ್ಘಾಟಿಸಿದರು.

ಅಧ್ಯಕ್ಷತೆಯನ್ನು ಡಾ. ಗೋಪಾಲಕೃಷ್ಣರ ತಂದೆ ಸೀತಾರಾಮ ಭಟ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಬೆಳ್ತಂಗಡಿ ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ, ನ್ಯಾಷನಲ್ ಹೆಲ್ತ್ ಮಿಶನ್ ನಿರ್ದೇಶಕ ಡಾ. ನವೀನ್ ಭಟ್, ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾ ಕಿರಣ್ ಕಾರಂತ್, ಉಪಾಧ್ಯಕ್ಷ ರವಿ ಕುಮಾರ್ ಬರೆಮೇಲು, ಡಾ. ನಮಿಷಾ ಭಟ್, ಡಾ. ಭಾರತಿ ಜಿ. ಕೆ., ಡಾ. ಅಂಕಿತಾ ಜಿ. ಭಟ್, ಡಾ. ಆದಿತ್ಯ, ಡಾ. ರೋಹಿತ್, ಡಾ. ನವ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಕೆ. ಹರೀಶ್ ಕುಮಾರ್, ಗಣ್ಯರು, ಹಿತೈಷಿಗಳು ಹಾಜರಿದ್ದರು. ಪಿಆರ್ ಓ ಎಸ್. ಜಿ. ಭಟ್, ಸಿಬ್ಬಂದಿಗಳು ಸಹಕರಿಸಿದರು.