ಸ್ಕಂದ ಸಂಜೀವಿನಿ ಗ್ರಾಮ ಪಂಚಾಯತ್ ಮಹಿಳಾ ಒಕ್ಕೂಟ ಮಹಾಸಭೆ

0

ಕಲ್ಮಂಜ: ಸ್ಕಂದ ಸಂಜೀವಿನಿ ಗ್ರಾಮ ಪಂಚಾಯತ್ ಮಹಿಳಾ ಒಕ್ಕೂಟಡ ವಾರ್ಷಿಕ ಮಹಾಸಭೆ ಜ. 17 ರಂದು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷೆ ಶೋಭ ವಹಿಸಿದ್ದರು. ಒಕ್ಕೂಟದ ಅಧ್ಯಕ್ಷರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸಂಜೀವಿನಿ ಸದಸ್ಯರ ಪ್ರಾರ್ಥನೆಯೊಂದಿಗೆ ವಲಯ ಮೇಲ್ವಿಚಾರಕ ಜಯಾನಂದ್ ಸರ್ ಸಂಜೀವಿನಿ ಯೋಜನೆಯ ಸವಿಸ್ತಾರವಾದ ಮಾಹಿತಿಯನ್ನು ಸದಸ್ಯರಿಗೆ ನೀಡಿದರು. ಒಕ್ಕೂಟದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಂಜೀವಿನಿಯಿಂದ ಪಿ. ಎಂ. ಎಫ್. ಎಮ್. ಇ‌‌ ಮತ್ತು ‌ಸಿ. ಐ. ಎಫ್ ಪಡೆದು ಸ್ವಾವಲಂಬಿ ಜೀವನ ನಡೆಸುತ್ತಿರುವ ಎಂಬಿಕೆ ಪುಷ್ಪರವರನ್ನು ಸನ್ಮಾನಿಸಲಾಯಿತು.

ಹಾಗೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದ ವಲಯ ಮೇಲ್ವಿಚಾರಕರನ್ನು ಒಕ್ಕೂಟದ ವತಿಯಿಂದ ಸನ್ಮಾನಿಸಲಾಯಿತು. ಎರೆಹುಳ ಗೊಬ್ಬರವನ್ನು ಉತ್ಪಾದಕರ ಗುಂಪಿನಿಂದ ಸ್ಕಂದ ಸಂಜೀವಿನಿ ಎಂಬ ಹೆಸರಿನಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು.

ಸದಸ್ಯರು ಬೆಳೆದ ತರಕಾರಿಗಳನ್ನು ‌ಮಾರಾಟಕ್ಕೆ ಇಡಲಾಯಿತು. ಒಕ್ಕೂಟದ ವತಿಯಿಂದ ಸಂಜೀವಿನಿ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು. ಒಕ್ಕೂಟದ ವಾರ್ಷಿಕ ವರದಿ ಜಮಾ ಖರ್ಚು ವಿವರವನ್ನು ಎಂಬಿಕೆ ಓದಿ ಹೇಳಿ ಅನುಮೋದನೆ ಪಡೆಯಲಾಯಿತು.

ಮಹಾಸಭೆಯಲ್ಲಿ ಲಕ್ಕಿ ಮಹಿಳೆಯನ್ನು ಗುರುತಿಸಿ ಬಹುಮಾನ ನೀಡಲಾಯಿತು. ಸಂಘದ ಸದಸ್ಯರು ಹಾಡು ನೃತ್ಯವನ್ನು ಮಾಡಿದರು. ನಂತರ ಪದಗ್ರಹಣ ಕಾರ್ಯಕ್ರಮವನ್ನು ನಡೆಸಲಾಯಿತು. ಹಳೆ ಸದಸ್ಯರಿಗೆ ಕಿರು ಕಾಣಿಕೆ ನೀಡಿ ಬೀಳ್ಕೊಡಲಾಯಿತು. ಶಿವಾನಿ ಸಂಜೀವಿನಿ ಸದಸ್ಯೆ ಮಮತಾ ಸ್ವಾಗತಿಸಿ, ಪ್ರಸಿದ್ಧಿ ಸಂಜೀವಿನಿ ಸದಸ್ಯೆ ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು. ದೀಪ ಸಂಜೀವಿನಿ ಸದಸ್ಯೆ ಶುಭ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here