p>
ಬೆಳ್ತಂಗಡಿ: ಜ. 05 ರಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ತಂಗಡಿ ಕ್ಷೇತ್ರ ವ್ಯಾಪ್ತಿಯ ತೆಂಕಕಾರಂದೂರು ಬ್ರಾಂಚ್ ಸಮಿತಿ ವತಿಯಿಂದ ಪೆರಲ್ದಾರಕಟ್ಟೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ ಅಧ್ಯಕ್ಷ ನವಾಝ್ ಮಂಜೊಟ್ಟಿ ನೇತೃತ್ವದಲ್ಲಿ ನಡೆಯಿತು.
ಪೆರಲ್ದಾರಕಟ್ಟೆ ಜಂಕ್ಷನ್ ನಿಂದ ಮಸೀದಿವರೆಗೆ ಮತ್ತು ಶಾಲಾ ವಠಾರದ ಕಸ ಕಡ್ಡಿ, ಪ್ಲಾಸ್ಟಿಕ್ ವಸ್ತುಗಳನ್ನು ಹೆಕ್ಕಿ, ಬಸ್ ನಿಲ್ದಾಣ ಸುತ್ತಮುತ್ತಲಿನ ಪ್ರದೇಶದ, ರಸ್ತೆ ಬದಿಯ ಗಿಡಗಂಟಿಗಳನ್ನು ಯಂತ್ರದ ಮೂಲಕ ಸ್ವಚ್ಛ ಮಾಡಲಾಯಿತು.
ಈ ಸ್ವಚ್ಛತಾ ಕಾರ್ಯದಲ್ಲಿ ಪಂಚಾಯತ್ ಸದಸ್ಯರಾದ ನಿಜಾಮ್ ಕಟ್ಟೆ, ಬದ್ರಿಯಾ ಯಂಗ್ ಮೆನ್ಸ್ ಅಧ್ಯಕ್ಷ ರಿಯಾಝ್ ಮಂಜೊಟ್ಟಿ, ಎಸ್. ಡಿ. ಪಿ. ಐ ಕಾರ್ಯಕರ್ತರು, ಗ್ರಾಮಸ್ಥರು ಭಾಗವಹಿಸಿದ್ದರು.