p>
ಬೆಳಾಲು: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ನೂತನ ನಿರ್ದೇಶಕರ ಸಭೆ ಜ. 6 ರಂದು ನಡೆಯಿತು. ಅಧ್ಯಕ್ಷರಾಗಿ ಹಾಲಿ ಅಧ್ಯಕ್ಷ ಹೆಚ್. ಪದ್ಮಗೌಡ 6 ನೇ ಬಾರಿಗೆ ಮರು ಆಯ್ಕೆಯಾದರು. ಉಪಾಧ್ಯಕ್ಷರಾಗಿ ಗ್ರಾಮ ಪಂಚಾಯತ್ ಸದಸ್ಯ ಹಾಲಿ ನಿರ್ದೇಶಕ ದಿನೇಶ್ ಕೋಟ್ಯಾನ್ ಆಯ್ಕೆಯಾದರು.
ನಿರ್ದೇಶಕರುಗಳಾದ ದಾಮೋದರ ಗೌಡ ಸುರುಳಿ, ಸುರೇಂದ್ರ ಗೌಡ ಎಸ್., ರಾಜಪ್ಪ ಯಾನೆ ಸೀತಾರಾಮ ಗೌಡ, ರಮೇಶ್ ಗೌಡ ಅಂಗಡಿಬೆಟ್ಟು, ಪ್ರವೀಣ್ ವಿಜಯ್, ಸುಕನ್ಯಾ ನಾರಾಯಣ ಸುವರ್ಣ, ಹೇಮಾ ವಚ್ಚ, ಶೀನಪ್ಪ ಗೌಡ ಕೊಲ್ಲಿಮಾರ್, ಸೀತಾರಾಮ ಬಿ. ಎಸ್., ಚಿಂಕ್ರ ಇವರು ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ಸಹಕಾರ ಅಭಿವೃದ್ಧಿ ಅಧಿಕಾರಿ ಪ್ರತಿಮಾ ಪ್ರಕ್ರಿಯೆ ನಡೆಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಾರಾಯಣ ಗೌಡ ಸಹಕರಿಸಿದರು.