ಉಜಿರೆ: ರಾಜ್ಯಮಟ್ಟದ ಹ್ಯಾಕಥಾನ್ ಸ್ಪರ್ಧೆಯಲ್ಲಿ ಬಹುಮಾನ

0

p>

ಉಜಿರೆ: ಶ್ರೀ ಧರ್ಮಸ್ಧಳ ಮಂಜುನಾಥೇಶ್ವರ ಇಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿಗಳ ತಂಡವು ಇತ್ತೀಚಿಗೆ ಮೈಸೂರಿನ ಎನ್. ಐ. ಇ ಕಾಲೇಜಿನಲ್ಲಿ ನಡೆದ ವೈದ್ಯುತೆಕ್‌ ವಿ. ಎಲ್. ಎಸ್. ಐ ಕೋಡಿಂಗ್ ಎಂಬ ವಿಷಯದ ರಾಜ್ಯಮಟ್ಟದ ಹ್ಯಾಕಥಾನ್ ಸ್ಪರ್ದೆಯಲ್ಲಿ ಪ್ರಥಮ ಬಹುಮಾನ ಪಡೆದುಕೊಂಡಿರುತ್ತದೆ. ಇಲೆಕ್ಟ್ರಾನಿಕ್ಸ್‌ ಮತ್ತು ಕಮ್ಯೂನಿಕೇಶನ್‌ ವಿಭಾಗದ ಚೇತನ್‌, ಅನಿರುದ್ದ ಕುಲಕರ್ಣಿ, ಭರಣ್‌, ಫಲ್ಘುಣ‌ ಮತ್ತು ಸೃಜನ್‌ ತಂಡದ ಸದಸ್ಯರಾಗಿದ್ದರು.

ವಿದ್ಯಾರ್ಥಿಗಳ ಈ ಸಾಧನೆಯನ್ನು ಅಧ್ಯಕ್ಷ ವೀರೇಂದ್ರ ಹೆಗ್ಗಡೆ, ಕಾರ್ಯದರ್ಶಿ ಹರ್ಷೇಂದ್ರ ಕುಮಾರ್‌ ಮತ್ತು ಸತೀಶ್ಚಂದ್ರ, ಅಶೋಕ್‌ಕುಮಾರ್‌ ಪ್ರಾಂಶುಪಾಲರು ಮತ್ತು ಸಿಬ್ಬಂದಿ ವರ್ಗ ಅಭಿನಂದಿಸಿದರು.

LEAVE A REPLY

Please enter your comment!
Please enter your name here