p>
ರಝಾನಗರ: ಬುರೂಜ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಇದರ ನೂತನ ಅಧ್ಯಕ್ಷರಾಗಿ ಮೊಹಮ್ಮದ್ ಸಿನಾನ್ ಕಲಬಾಗಿಲು ಆಯ್ಕೆಯಾದರು. ಶಾಲಾ ವಾರ್ಷಿಕೋತ್ಸವದ ಪ್ರಯುಕ್ತ ಹಳೆ ವಿದ್ಯಾರ್ಥಿಗಳ ಕ್ರೀಡಾಕೂಟ ಸಂದರ್ಭದಲ್ಲಿ ಶಾಲಾ ಕೊಠಡಿಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು.
ಗೌರವಾಧ್ಯಕ್ಷರಾಗಿ ಮೊಹಮ್ಮದ್ ಯೂಸುಫ್, ಉಪಾಧ್ಯಕ್ಷರಾಗಿ ಐಮನ್, ಸಹ ಉಪಾಧ್ಯಕ್ಷರಾಗಿ ಧ್ಯಾನ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಆಶಿಸ್ ಪೂಜಾರಿ, ಸಹ ಪ್ರಧಾನ ಕಾರ್ಯದರ್ಶಿಯಾಗಿ ಶೇಖ್ ಸಾದಿಯ, ಕೋಶಾಧಿಕಾರಿಯಾಗಿ ಹಬೀಬ್ ಅಬ್ದುಲ್ ಕದೀರ್ ಆಯ್ಕೆಯಾಗಿದ್ದಾರೆ.
ಕಮಿಟಿ ಸದಸ್ಯರಾಗಿ ಶೇಖ್ ಮೊಹಮ್ಮದ್ ದಾನಿಶ್, ಶಫೀದ್ ಅಬ್ದುಲ್ ರೆಹಮಾನ್, ಅಮ್ರಿನ್ ಬಾನು ಫಾತಿಮತ್ ಝುಹಾ, ತಸ್ನೀಯಾ ಸಗುಪ್ತ ಬಾನು ಮೊಹಮ್ಮದ್ ತಬ್ರೇಝ್ ಆಯ್ಕೆಯಾಗಿರುತ್ತಾರೆ.
ಬಂದಂತಹ ಹಳೆ ವಿದ್ಯಾರ್ಥಿಗಳನ್ನು ಸಂಚಾಲಕ ಶೇಖ್ ರಹ್ಮತ್ತುಲ್ಲಾಹ್ ಸ್ವಾಗತಿಸಿದರು. ಎಲ್ಸಿ ಲಸ್ರಾದೋ ಕಾರ್ಯಕ್ರಮ ನಿರೂಪಿಸಿದರು.