ಆರಂಬೋಡಿ: ಡಿ. 29 ರಂದು 4:30ಕ್ಕೆ ಸರಿಯಾಗಿ, ಕೊಡ್ಯೇಲು ಸಂಜೀವ ಶೆಟ್ಟಿಯವರ ಹಾಲ್ ನಲ್ಲಿ ಬಂಟರ ಸಂಘದ ಗ್ರಾಮ ಸಮಿತಿಯ ಈ ವರ್ಷದ ಮೊದಲನೇ ಸಭೆಯನ್ನು ನಡೆಸಲಾಯಿತು. ಇಂದಿನ ಸಭೆಯ ಅಧ್ಯಕ್ಷತೆಯನ್ನು ಅಧ್ಯಕ್ಷರಾದ ನೋಣಯ್ಯ ಶೆಟ್ಟಿ ಕೊಡ್ಯೇಲು ವಹಿಸಿದ್ದು, ಈ ಸಭೆಯಲ್ಲಿ ವಲಯ ಬಂಟರ ಸಂಘದ ಸಂಚಾಲಕರಾದ ರಮೇಶ್ ಶೆಟ್ಟಿ ಪೆರಿಂಜೆ, ವೇಣೂರು ವಲಯ ಬಂಟರ ಸಂಘದ ಕಾರ್ಯದರ್ಶಿ ಸಂದೀಪ್ ಶೆಟ್ಟಿ ಕುಂಡಾಜೆ ಉಪಸ್ಥಿತರಿದ್ದರು.
ಮುಂದಿನ 2 ವರ್ಷದ ಅವಧಿಗೆ ನೂತನ ಅಧ್ಯಕ್ಷ, ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳ ಆಯ್ಕೆಯನ್ನು ಸರ್ವಾನುಮತದಿಂದ ಮಾಡಲಾಯಿತು. ಗ್ರಾಮದ ವಿವಿಧ ಏರಿಯಾಗಳಿಗೆ ಜವಾಬ್ದಾರಿ ಸದಸ್ಯರುಗಳ ನೇಮಕವನ್ನು ಮಾಡಲಾಯಿತು.
ಅಧ್ಯಕ್ಷರು ರತ್ನಾಕರ ಶೆಟ್ಟಿ ಹೊಕ್ಕಾಡಿಗೋಳಿ, ಕಾರ್ಯದರ್ಶಿ ಶಿವರಾಜ್ ಶೆಟ್ಟಿ ಅಜ್ಜಾಡಿ, ಜೊತೆ ಕಾರ್ಯದರ್ಶಿ ಶಶಿಧರ ಶೆಟ್ಟಿ ಹಕ್ಕೇರಿ, ಕೋಶಾಧಿಕಾರಿ ಸತೀಶ್ ಶೆಟ್ಟಿ ಕುಂಜಾಡಿ ಹಾಗೂ ಉಪಾಧ್ಯಕ್ಷರುಗಳು ವಿಶ್ವನಾಥ ಶೆಟ್ಟಿ ಐತ್ತೇರಿ, ರಾಧಾಕೃಷ್ಣ ಶೆಟ್ಟಿ ಉಗ್ರೋಡಿ, ಯಶೋಧ ಚಂದ್ರಶೇಖರ ಶೆಟ್ಟಿ ಪೂವಳ.
ನೋಣಯ್ಯ ಶೆಟ್ಟಿ ಕೊಡ್ಯೇಲು, ರಮೇಶ್ ಎಂ. ಶೆಟ್ಟಿ ಉಗ್ರೋಡಿ, ಸಂದೀಪ್ ಶೆಟ್ಟಿ ಉಮನೊಟ್ಟು ಇವರನ್ನು ಗೌರವ ಸಲಹೆಗಾರರಾಗಿ ಮತ್ತು ಹರೀಶ್ ಜೆ. ಶೆಟ್ಟಿ ಕುಂಜಾಡಿ ಪೂಂಜ, ಸದಾಶಿವ ಶೆಟ್ಟಿ ಅಸನಬೆಟ್ಟು, ರವಿಪ್ರಸಾದ್ ಶೆಟ್ಟಿ ಪಿಲಿಕಜೆ, ಶರತ್ ಶೆಟ್ಟಿ, ಧೀರಾಜ್ ಶೆಟ್ಟಿ, ಆರ್ಥಿಕ್ ಶೆಟ್ಟಿ ಪಾಲ್ಯ, ಉಮೇಶ್ ಶೆಟ್ಟಿ, ಅಶೋಕ್ ಶೆಟ್ಟಿ ಹಕ್ಕೇರಿ, ಸಚಿನ್ ಕೆ. ಶೆಟ್ಟಿ, ಶ್ರೀನಿಧಿ ಶೆಟ್ಟಿ ಒಳಬೈಲು, ಬಾಲಕೃಷ್ಣ ಶೆಟ್ಟಿ, ವಿಜಯ ಶೆಟ್ಟಿ ಬರಾಯಿ ಪೂವಳ, ಸಂದೀಪ್ ಶೆಟ್ಟಿ ಕುಂಡಾಜೆ, ಚಂದ್ರಶೇಖರ ಶೆಟ್ಟಿ ಹೆನ್ನಿಮಾರ್, ಸುಜಿತ್ ಶೆಟ್ಟಿ, ರತನ್ ಶೆಟ್ಟಿ ಉಗ್ರೋಡಿ, ಪುಷ್ಪರಾಜ್ ಶೆಟ್ಟಿ. ಇವರನ್ನು ಜವಾಬ್ದಾರಿಯುತ ಸದಸ್ಯರಾಗಿ ನೇಮಕ ಮಾಡಲಾಯಿತು.