ಉಜಿರೆ: ಸ್ನೇಹ ಸಮ್ಮಿಲನ ಹಾಗೂ ಗುರುವಂದನ ಕಾರ್ಯಕ್ರಮ

0

p>

ಉಜಿರೆ: 1996-1999 ರ ಅವಧಿಯಲ್ಲಿ ಎಸ್‌. ಡಿ. ಎಂ. ಸೆಕೆಂಡರಿ ಶಾಲೆ ಮತ್ತು ರತ್ನಮಾನಸ ವಿದ್ಯಾರ್ಥಿನಿಲಯದಲ್ಲಿ ಪ್ರೌಢಶಿಕ್ಷಣ ಪೂರೈಸಿದ ಹಿರಿಯ ವಿದ್ಯಾರ್ಥಿಗಳು, ಶಿಕ್ಷಕ ವೃಂದದ ಸಮಾವೇಶ ಹಾಗೂ ಗುರುವಂದನ ಕಾರ್ಯಕ್ರಮ ಡಿ. 28 ರಂದು ಶಾಲೆಯ ಸಭಾಭವನದಲ್ಲಿ ನಡೆಯಿತು. ಶಾಲಾ ಮುಖ್ಯಶಿಕ್ಷಕ ಸುರೇಶ್ ಕೆ. ಸಮಾರಂಭವನ್ನು ಉದ್ಘಾಟಿಸಿದರು.

ಹಿರಿಯ ವಿದ್ಯಾರ್ಥಿಗಳಾದ ಮಂಜನಾಯ್ಕ, ಅಂತರರಾಷ್ಟ್ರೀಯ ಚಿತ್ರಕಲಾವಿದ ಉಜಿರೆಯ ವಿಲಾಸ್ ಆರ್. ನಾಯಕ್, ಪವಿತ್ರ ಶೆಣೈ ವಿದ್ಯಾರ್ಥಿಗಳಾಗಿದ್ದ ಸಂಧರ್ಭದ ಜೀವನದ ಕುರಿತು ಮಾತನಾಡಿದರು.
ಹಿರಿಯ ಶಿಕ್ಷಕರಾದ ಶಂಕರನಾರಾಯಣ ರಾವ್, ಬಿ. ಜನಾರ್ದನ ತೋಳ್ಪಡಿತ್ತಾಯ, ಮೋಹನ ಎಸ್. ಜೈನ್, ಸದಾಶಿವ ಪೂಜಾರಿ, ಕಲಾವತಿ ಸಿ. ಎಚ್., ಆರ್. ಎನ್. ಪೂವಣಿ, ಎನ್. ಪದ್ಮರಾಜು, ರಮೇಶ ಮಯ್ಯ, ವಿ. ಕೆ. ವಿಟ್ಲ, ಕೃಷ್ಣ ಶೆಟ್ಟಿ ಮಾತನಾಡಿದರು. ಶಿಕ್ಷಕರಿಗೆ ಗುರುನಮನ ಸಲ್ಲಿಸಲಾಯಿತು. ವಿಲಾಸ್ ಆರ್. ನಾಯಕ್‌ ಅವರನ್ನು ಗೌರವಿಸಲಾಯಿತು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಿಕ್ಷಕರು, ಅಂದು ಮಕ್ಕಳನ್ನು ಶಿಕ್ಷಿಸಿ, ತಿದ್ದಿ, ತೀಡಿ,ಜೀವನದಲ್ಲಿ ಉತ್ತಮವಾದ ವ್ಯಕ್ತಿಯನ್ನಾಗಿ ರೂಪಿಸುವುದು ಶಿಕ್ಷಕರ ಕರ್ತವ್ಯವಾಗಿದ್ದು ನಮ್ಮಿಂದಾದ ಸಣ್ಣ ಪುಟ್ಟ ನೋವುಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳದೇ ಈ ಅದ್ಭುತ ಕ್ಷಣವನ್ನು ಸೃಷ್ಟಿಸಿದ್ದೀರಿ. ಒಂದೇ ವೇದಿಕೆಯಲ್ಲಿ ದಶಕಗಳ ನಂತರ ಎಲ್ಲಾ ನಿವೃತ್ತ ಅಧ್ಯಾಪಕರುಗಳನ್ನು ಒಗ್ಗೂಡಿಸಿರುವುದು ಅವಿಸ್ಮರಣೀಯವಾಗಿದೆ. ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನಕ್ಕೆ ಸೀಮಿತವಾಗದೆ, ಶಿಕ್ಷಕ ವೃಂದದವರ ಸಮ್ಮಿಲನವಾಗಿದೆ.

ಜೀವನ ಮೌಲ್ಯಗಳನ್ನು ತರಗತಿಯ ಕೊಣೆಗಳಲ್ಲಿ ಭೋದಿಸಬೇಕಾದ ಈ ಕಾಲಘಟ್ಟದಲ್ಲಿ ಇಂತಹ ಕಾರ್ಯಕ್ರಮಗಳ ಅಗತ್ಯತೆ ಇದ್ದು, ಕಾರ್ಯಕ್ರಮದ ಉದ್ದೇಶ, ಚಿಂತನೆ, ಒಗ್ಗೂಡುವಿಕೆ ಮುಂದಿನ ಪೀಳಿಗೆಗೆ ಮಾದರಿಯಾಗಲಿ ಎಂದು ಹರಸಿ ಹಾರೈಸಿದರು.

ವಿಲಾಸ್ ಆರ್. ನಾಯಕ್‌ ತಮ್ಮ ಪ್ರೌಢಶಿಕ್ಷಣದ ಹಂತದಲ್ಲಿ ತಾನು ಚಿತ್ರಕಲೆಯಲ್ಲಿ ಆಸಕ್ತಿಯನ್ನು ಹೊಂದಿದ್ದು ಗುರುವೃಂದದವರ ಬೆಂಬಲದಿಂದ ಹಂತ ಹಂತವಾಗಿ ಬೆಳೆದು ಬಂದ ವಿಚಾರಗಳನ್ನು ಮೆಲುಕುಹಾಕಿದರು.
ಪುನೀತಾ ಪ್ರಭಾಕರ್ ಸ್ವಾಗತಿಸಿದರು. ವಿಶ್ವಮೋಹನ್ ಕೆ. ಎನ್., ಡಾ. ವೆಂಕಟೇಶ್ ಕೆ. ಟಿ ಮತ್ತು ಸೌಮ್ಯ ಕುಮಾರಿ ಶಿಕ್ಷಕರ ಜೀವನ ಚರಿತ್ರೆಯ ಸಂಕ್ಷಿಪ್ತ ಮಾಹಿತಿಯನ್ನು ಹಂಚಿಕೊಂಡರು. ಗಾಯತ್ರಿ ಪಿ. ಕಾರ್ಯಕ್ರಮ ನಿರ್ವಹಿಸಿದರು. ಸೌಮ್ಯ ಕುಮಾರಿ ವರದಿ ವಾಚಿಸಿದರು. ಶ್ವೇತಾ ಪೈ ವಂದಿಸಿದರು.

LEAVE A REPLY

Please enter your comment!
Please enter your name here