ಭುಜಬಲಿ ಧರ್ಮಸ್ಥಳ ಅವರಿಗೆ ಶ್ರೀ ಯಕ್ಷಾಂಜನೆಯ ಪ್ರಶಸ್ತಿ ಪ್ರದಾನ

0

p>

ಉಜಿರೆ: ಪುತ್ತೂರು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಮತ್ತು ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದ ವತಿಯಿಂದ ಡಿ. 25 ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಶ್ರೀ ನಟರಾಜ ವೇದಿಕೆಯಲ್ಲಿ ಜರುಗಿದ ಶ್ರೀ ಆಂಜನೇಯ 56 ರ ಸಮಾರಂಭದಲ್ಲಿ ಯಕ್ಷಗಾನ ಸಂಘಟಕ, ಅಪೂರ್ವ ಧ್ವನಿಸುರುಳಿಗಳ ನಿರ್ಮಾಪಕ, ಅನನ್ಯ ತಾಳಮದ್ದಲೆಗಳ ರೂವಾರಿ, ಸಹಕಾರ ಸಂಘಗಳ ಧೀಮಂತ, ಧಾರ್ಮಿಕ ನೇತಾರ, ಕಲಾ ಕ್ಷೇತ್ರದಲ್ಲಿ ಹಲವು ಹೊಸತನದ ಕರ್ತೃ, ಸಜ್ಜನ, ದಾನಿ, ನಿವೃತ್ತ ಜಮಾ ಉಗ್ರಾಣ ಮುತ್ಸದ್ದಿ ಭುಜಬಲಿ ಧರ್ಮಸ್ಥಳ ಅವರಿಗೆ ಗಣ್ಯ ಅತಿಥಿಗಳು ಶ್ರೀ ಯಕ್ಷಾಂಜನೇಯ ಪ್ರಶಸ್ತಿ ಹಾಗು ಖ್ಯಾತ ಯಕ್ಷಗಾನ ಭಾಗವತೆ ಭವ್ಯಶ್ರೀ ಕುಲಕುಂದ ಅವರಿಗೆ ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದ ಮಹಿಳಾ ವಿಂಶತಿ ಗೌರವ ನೀಡಿ ಅಭಿನಂದಿಸಲಾಯಿತು.

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಅರ್ಚಕ ವೇದಮೂರ್ತಿ ಹರಿನಾರಾಯಣದಾಸ ಅಸ್ರಣ್ಣ, ಅಧ್ಯಕ್ಷತೆ ವಹಿಸಿದ ಸ್ವರ್ಣೋದ್ಯಮಿ ಬಲರಾಮ ಆಚಾರ್ಯ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಹಿರಿಯ ಅರ್ಥಧಾರಿ ಪ್ರಭಾಕರ ಜೋಶಿ, ವಿನಯಕುಮಾರ್ ಮೊದಲಾದವರು ಪ್ರಶಸ್ತಿ ಪ್ರಧಾನಗಗೈದು ಗೌರವಿಸಿದರು.

ರಾಷ್ಟ್ರಪ್ರಶಸ್ತಿ ಪುರಸ್ಕೃತ ದಿವಾಕರ ಆಚಾರ್ಯ ಗೇರುಕಟ್ಟೆ ಭುಜಬಲಿ ಧರ್ಮಸ್ಥಳ ಅವರನ್ನು ಅಭಿನಂದಿಸಿದರು. ಆಂಜನೇಯ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ, ಕಾರ್ಯದರ್ಶಿ ಆನಂದ ಸವಣೂರು, ಕೋಶಾಧಿಕಾರಿ ದುಗ್ಗಪ್ಪ ಎನ್. ಮೊದಲಾದವರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here