ಶಿಬಾಜೆ: ಪೆರ್ಲ ರಾಜರಾಜೇಶ್ವರಿ ಭಜನಾ ಮಂಡಳಿಗೆ 41 ನೇ ವರ್ಷಾಚರಣೆ – ಡಿ. 29: ಭಜನೋತ್ಸವ

0

p>

ಶಿಬಾಜೆ: ರಾಜರಾಜೇಶ್ವರಿ ಭಜನಾಮಂಡಳಿಯ ವತಿಯಿಂದ ಸ್ತ್ರೀ ಶಕ್ತಿ ಸ್ವ ಸಹಾಯ ಸಂಘಗಳು ಪೆರ್ಲ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಹಾಗೂ ಊರವರ ಸಹಕಾರದಿಂದ ನಡೆಯಲಿರುವ 41 ನೇ ವರ್ಷದ ಭಜನೋತ್ಸವ ಡಿ. 29 ರಂದು ನಡೆಯಲಿದ್ದು ಭಜನಾಂಗಣ ಸಿದ್ಧತೆಯ ಕಾರ್ಯ ಭರದಿಂದ ಸಾಗಿದೆ.

ಭಜನಾ ಮಂಡಳಿಯ ಸದಸ್ಯರು, ಊರವರು 41 ನೇ ಭಜನೋತ್ಸವವನ್ನು ಸಂಭ್ರಮದಿಂದ ಆಚರಿಸಲು ಕಾತುರದಿಂದ ಕಾಯುತ್ತಿದ್ದು. ಊರ ಪರವೂರ ಹಲವಾರು ಭಜನಾ ತಂಡಗಳು ಭಜನೋತ್ಸವದಲ್ಲಿ ಭಾಗವಹಿಸಲಿದ್ದು, ಸಂಜೆ 6 ಗಂಟೆಗೆ ಉದ್ಯಮಿಗಳಾದ ರಾಘವೇಂದ್ರ ನಾಯಕ್ ದೀಪ ಪ್ರಜ್ವಲನೆ ಮೂಲಕ ಭಜನೋತ್ಸವಕ್ಕೆ ಅಧಿಕೃತ ಚಾಲನೆ ನೀಡಲಿದ್ದಾರೆ.

ಈ ಸಂಧರ್ಭದಲ್ಲಿ ಭಜನಾ ಮಂಡಳಿಯ ಗೌರವಾಧ್ಯಕ್ಷ ತ್ಯಾoಪಣ್ಣ ಶೆಟ್ಟಿಗಾರ್, ಅಧ್ಯಕ್ಷ ವಿನಯಚಂದ್ರ, ಕಾರ್ಯದರ್ಶಿ ಕಿರಣ್ ಕುಮಾರ್ ಹಾಗೂ ಪದಾಧಿಕಾರಿಗಳು, ಸದಸ್ಯರು ಜತೆಗಿದ್ದು ಸಹಕಾರ ನೀಡಲಿದ್ದಾರೆ.

LEAVE A REPLY

Please enter your comment!
Please enter your name here