p>
ಕುವೆಟ್ಟು: ಮದ್ದಡ್ಕ ಮನೀಶ್ ಹೋಟೆಲ್ ಮಾಲಕ, ಸುದ್ದಿ ಬಿಡುಗಡೆ ವಾರಪತ್ರಿಕೆ ವಿತರಕ ರಮೇಶ್ ಪೂಜಾರಿ(57 ವ) ಡಿ. 12 ರಂದು ಬ್ರೈನ್ ಟ್ಯೂಮರ್ ಸಂಭವಿಸಿ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಡಿ.13 ರoದು ನಿಧನರಾದರು.
ಮೃತರು ಬಂಟ್ವಾಳ ತಾಲೂಕಿನ ಕೊಪ್ಪಳ ನಿವಾಸಿಯಾಗಿದ್ದು, ಕೆಲವು ವರ್ಷಗಳಿಂದ ಮದ್ದಡ್ಕದಲ್ಲಿ ನೆಲೆಸಿ ಹೋಟೆಲ್ ಉದ್ಯಮ ನಡೆಸುತ್ತಿದ್ದರು. ಮೃತರು ಪತ್ನಿ ಮಮತಾ ಹಾಗೂ ಮಕ್ಕಳಾದ ಸೂರಜ್ ಮತ್ತು ಮನಿಷ್ ರನ್ನು ಅಗಲಿದ್ದಾರೆ.