ಬೆಳ್ತಂಗಡಿ: ಪೆರಿಂಜೆ ನಿವಾಸಿ ಸುಂದರ ನೇಣು ಬಿಗಿದುಕೊಂಡು ಆತ್ಮಹತ್ಯೆ

0

p>

ಬೆಳ್ತಂಗಡಿ: ಕೆಲವು ದಿನಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಡಿ. 4 ರಂದು ನಡೆದಿದೆ. ಹೊಸಂಗಡಿ ಗ್ರಾಮದ ಪಡ್ಯಾರಬೆಟ್ಟು ಸಮೀಪದ ಪೆರಿಂಜೆ ನಿವಾಸಿ ಸುಂದರ (41ವ) ಎಂಬವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡವರು.

ಇವರು ಕಳೆದ ಕೆಲವು ಸಮಯದಿಂದ ಮಾನಸಿಕ ಖಿನ್ನತೆಗೆ ಸಂಬಂಧಿಸಿ ಚಿಕಿತ್ಸೆ ಪಡೆಯುತ್ತಿದ್ದು ಇತ್ತೀಚಿಗೆ ಕೆಲವು ದಿನಗಳಿಂದ ಕಸಬಾ ಗ್ರಾಮದ ರೆಂಕೆದಗುತ್ತುವಿನಲ್ಲಿರುವ ತನ್ನ ಸಹೋದರಿ ಶೋಭಾ ಎಂಬವರ ಮನೆಯಲ್ಲಿದ್ದು ಚಿಕಿತ್ಸೆಗಾಗಿ ಬಂಟ್ವಾಳಕ್ಕೆ ಹೋಗಿ ಬರುತ್ತಿದ್ದರು. ಸಹೋದರಿಯ ಮನೆಯಲ್ಲಿ ಮಂಗಳವಾರ ರಾತ್ರಿ ಊಟ ಮಾಡಿ ಸುಮಾರು 11 ಗಂಟೆ ಹೊತ್ತಿಗೆ ಮಲಗಿದ್ದ ಸುಂದರ ತಮ್ಮ ಚಿಕಿತ್ಸೆ ಗುಣಮುಖರಾಗದೆ ಮನನೊಂದು ಬುಧವಾರ ಮನೆಯ ಹಿಂಭಾಗದಲ್ಲಿ ಬಾತ್ ರೂಮ್ ನ ಪಕ್ಕಾಸ್ ಒಂದಕ್ಕೆ ತನ್ನ ಲುಂಗಿಯಿಂದಲೇ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

p>

LEAVE A REPLY

Please enter your comment!
Please enter your name here