ಬೆಳ್ತಂಗಡಿ: ಅರ್. ಪಿ. ಸಿ ಸಂಸ್ಥೆಯ ವತಿಯಿಂದ ಸೇವಾ ರೂಪದಲ್ಲಿ ಅರ್ಹ ಬಡ ಕುಟುಂಬಗಳಿಗೆ ಅಗತ್ಯ ವಸ್ತುಗಳನ್ನು ಪೂರೈಸುವ ಮೂಲಕ ಸಾಮಾಜಿಕ ಸೇವಾ ಕಾರ್ಯವನ್ನು ಈಚೆಗೆ ಹಮ್ಮಿಕೊಳ್ಳಲಾಯಿತು. ಕೆಲ್ಲಕೆರೆ, ಎನ್. ಸಿ. ರೋಡ್, ಪುಂಜಾಲಕಟ್ಟೆ, ಕುಕ್ಕಾವು, ಬೆಳಾಲು, ಪಜಿರಡ್ಕ, ಅಂತರಬೈಲು, ಕುಂಜರ್ಪ, ಗುರಿಪಲ್ಲ, ಮಾಚಾರು ಈ ಮುಂತಾದೆಡೆ ಅರ್. ಪಿ. ಸಿ ಸಂಸ್ಥೆಯ ಉದ್ಯೋಗಿಗಳು ಹೋಗಿ ಸುಮಾರು 200 ಆಹಾರ ಸಾಮಗ್ರಿ ಕಿಟ್ ಗಳನ್ನು, ಉಡುಪಿ, ಮಂಗಳೂರು, ಮೂಡಬಿದ್ರೆ, ಬಂಟ್ವಾಳ, ಸುಳ್ಯ, ಉಪ್ಪಿನಂಗಡಿ, ಧರ್ಮಸ್ಥಳ, ಪಟ್ರಮೆ, ಸವಣಾಲು, ಬೆಳ್ತಂಗಡಿ, ಮಡಂತ್ಯಾರು, ಗೇರುಕಟ್ಟೆ, ಕಕ್ಕೆಪದವು ಈ ಮುಂತಾದೆಡೆ ಬಡ ರೋಗಿಗಳಿಗೆ 10 ಹಾಸ್ಪಿಟಲ್ ಕಾಟ್ (ಮಂಚ), 35 ವಾಟರ್ ಬೆಡ್, 20 ವೀಲ್ ಚೆಯರ್, 25 ವಾಕರ್ ಈ ಮುಂತಾದವುಗಳನ್ನು ಹಸ್ತಾಂತರಿಸುವ ಕಾರ್ಯವನ್ನು ಮಾಡಿದರು.
ಈ ಹಿಂದೆ ವಿಮುಕ್ತಿ ದಯಾ ಶಾಲೆಯ ವಿಕಲಾಂಗ ಚೇತನ ವಿದ್ಯಾರ್ಥಿಗಳಿಗೆ ಅಗತ್ಯ ಪುಸ್ತಕ ಸಾಮಗ್ರಿ, ಲಾಯಿಲ ಶಾಲೆಯ ನವೀಕರಣಕ್ಕೆ ಸಹಕಾರ, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿದ್ದ ಸಂಸ್ಥೆಯು ಇಂದು ಬಡ ಕುಟುಂಬಗಳಿಗೆ ಆಹಾರ ಸಾಮಗ್ರಿ ವಿತರಣೆ, ಬಡ ರೋಗಿಗಳಿಗೆ ಅಗತ್ಯ ವಸ್ತುಗಳನ್ನು ನೀಡುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.