ಮಂಜೊಟ್ಟಿ: ಸ್ಟಾರ್ ಲೈನ್ ಆಂಗ್ಲ ಮಾಧ್ಯಮ ಶಾಲೆ ರಝಾ ಗಾರ್ಡನ್ ನ ವಿದ್ಯಾರ್ಥಿ ಹಾಗೂ ಎಸ್. ಎಸ್. ಎಫ್. ಲಾಯಿಲ ಶಾಖೆಯ ಪ್ರತಿಭೆ ಸಯ್ಯದ್ ಮುಹಮ್ಮದ್ ಉವೈಸ್ ಎಸ್. ಎಸ್. ಎಫ್ ಇಂಡಿಯಾ ವತಿಯಿಂದ ಗೋವಾ ರಾಜ್ಯದ ವೆರ್ನದಲ್ಲಿ ನ. 29-30 ಮತ್ತು ಡಿ. 1 ರಂದು ನಡೆಸಿದ “ರಾಷ್ಟ್ರಮಟ್ಟದ ಸಾಹಿತ್ಯೋತ್ಸವ -24 ” ಇದರ ಜೂನಿಯರ್ ವಿಭಾಗದ ಉರ್ದು ಭಾಷಣ ಸ್ಪರ್ಧೆಯಲ್ಲಿ ಪ್ರತಿನಿಧಿಸಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.
ಸುಮಾರು 26 ರಾಜ್ಯಗಳಿಂದ ಭಾಗವಹಿಸಿದ್ದ ಸ್ಪರ್ದಾಳುಗಳಲ್ಲಿ ಪ್ರಥಮ ಸ್ಥಾನವನ್ನು ಪಡೆದು ಕರ್ನಾಟಕ ರಾಜ್ಯಕ್ಕೆ, ಶಾಲೆಗೆ ಹಾಗೂ ಹೆತ್ತವರಿಗೆ ಗೌರವವನ್ನು ತಂದುಕೊಟ್ಟಿದ್ದಾರೆ. ಉವೈಸ್ 2023-24ನೇ ಸಾಲಿನಲ್ಲಿ ಆಂಧ್ರಪ್ರದೇಶದ ಗುಂಟಕಲ್ ನಲ್ಲಿ ನಡೆದ ರಾಷ್ಟ್ರಮಟ್ಟದ ಸಾಹಿತ್ಯೋತ್ಸವದಲ್ಲಿಯೂ ಪ್ರಥಮ ಸ್ಥಾನವನ್ನು ಪಡೆದು ಸತತ ಎರಡನೇ ಬಾರಿ ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.
ಉವೈಸ್ ಸ್ಟಾರ್ ಲೈನ್ ವಿದ್ಯಾಸಂಸ್ಥೆಯ ಆಡಳಿತ ಟ್ರಸ್ಟಿನ ಕಾರ್ಯದರ್ಶಿ ಸೈಯದ್ ಮುಹಮ್ಮದ್ ಅಯ್ಯುಬ್ ಹಾಗೂ ನೂರ್ ಶಬ ದಂಪತಿಗಳ ಪುತ್ರರಾಗಿರುತ್ತಾರೆ.