ಬೆಳ್ತಂಗಡಿ: ಸ್ಪಂದನಾ ಸೇವಾ ಸಂಘದಿಂದ ಭಾಸ್ಕರ ಗೌಡರ ಚಿಕಿತ್ಸೆಗೆ ನೆರವು

0

p>

ಬೆಳ್ತಂಗಡಿ: ಸ್ಪಂದನಾ ಸೇವಾ ಸಂಘದ 153ನೇ ಸೇವಾ ಯೋಜನೆಯ ಧನ ಸಹಾಯವನ್ನು ಆರ್ಥಿಕ ಸಂಕಷ್ಟದಲ್ಲಿದ್ದು ತೀವ್ರ ಅನಾರೋಗ್ಯಕ್ಕೊಳಗಾದ ನಿಡ್ಲೆ ಗ್ರಾಮದ ನೆಡಿಲು ಮನೆ ಭಾಸ್ಕರ ಗೌಡರಿಗೆ ಚಿಕಿತ್ಸಾ ಸಹಾಯಾರ್ಥವಾಗಿ ರೂ. 15,000/- ದ ಚೆಕ್ಕನ್ನು ಸ್ಪಂದನಾ ಸೇವಾ ಸಂಘದ ಸಕ್ರೀಯ ಸದಸ್ಯ ಚಿದಾನಂದ ಗೌಡರ ಮೂಲಕ ಫಲಾನುಭವಿಯ ಮನೆಯವರಿಗೆ ಹಸ್ತಾಂತರ ಮಾಡಲಾಯಿತು.

ಸ್ಪಂದನಾ ಸೇವಾ ಸಂಘದ ಸಂಚಾಲಕ ಸೀತಾರಾಮ ಬೆಳಾಲು, ವಾಣಿ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯ ನಿರ್ದೇಶಕ ಸುರೇಶ್ ಕೌಡಂಗೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಧನಂಜಯ್ ಕುಮಾರ್, ವಾಣಿ ಕಾಲೇಜಿನ ಉಪಾನ್ಯಾಸಕಿ ಮೀನಾಕ್ಷಿ ಮಹಾಬಲ ಗೌಡ, ಸ್ಪಂದನಾ ಸೇವಾ ಸಂಘದ ಸದಸ್ಯರಾದ ನಿತಿನ್ ಕಲ್ಮಂಜ, ಪ್ರಶಾಂತ್ ಮುಚ್ರಾಳಿ ನೆರಿಯ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here