ಕರಾಯ: ಅವಿಭಾಜ್ಯ ಜಿಲ್ಲೆಗಳ ಪ್ರತಿಷ್ಠಿತ ಬಿಲ್ಲವ ಮನೆತನಗಳಲ್ಲಿ ಒಂದಾದ ಮುಗ್ಗ ಗುತ್ತಿನಲ್ಲಿ ಅ.3ರಂದು ನವರಾತ್ರಿ ಉತ್ಸವ ಪ್ರಾರಂಭಗೊಂಡಿತು.
ಉತ್ಸವದ ಅಂಗವಾಗಿ ಮೊದಲ ದಿನ ತೆನೆಹಬ್ಬ ಮುಹೂರ್ತದೊಂದಿಗೆ ಪ್ರಾರಂಭವಾಗಿ, ಹೋಮ, ದುರ್ಗಾಂಬಿಕ ದೇವಿಗೆ ಹೂವಿನ ಪೂಜೆ ಮತ್ತು ಮಹಾಪೂಜೆ, ಪ್ರಶಾಂತ ಶಾಂತಿಯವರ ಪೌರೋಹಿತ್ಯದಲ್ಲಿ ಜರಗಿದ್ದು ಪ್ರಶಾಂತ್ ಬಂಗೇರ, ದಿನೇಶ್ ಬಂಗೇರ, ಕೀರ್ತಿ ಬಂಗೇರರವರು ಸಹಕರಿಸಿದರು.
ಪೂಜಾ ಕಾರ್ಯಕ್ರಮದಲ್ಲಿ ಮುಗ್ಗ ಗುತ್ತು ಮೊಕ್ತೇಸರ ಪೀತಾಂಬರ ಹೆರಾಜೆ, ಟ್ರಸ್ಟ್ ಅಧ್ಯಕ್ಷ ಹರೀಶ್ ಕುಮಾರ್ ಕೆ, ಜಗನ್ನಾಥ ಬಂಗೇರ ನಿರ್ಮಾಲ್, ಡಾ.ರಾಜಾರಾಮ್, ಜಯರಾಮ ಕೋಂಗುಜೆ, ಚರಣ್ ಕೆ, ಜಯರಾಮ ಬಂಗೇರ, ಶಾರದಾ ಬಂಗೇರ, ಪದ್ಮನಾಭ ಎಂ.ಪಾದೆ ಮುಂತಾದವರು ಉಪಸ್ಥಿತರಿದ್ದರು.
p>