


ಧರ್ಮಸ್ಥಳ: ಧರ್ಮಸ್ಥಳ ನೇರ್ತನೆ ನಿವಾಸಿ ಉದ್ಯಮಿ ಆ್ಯಂಟನಿ ಎ.ಜೆ(49 ವ) ಅವರು ಅಲ್ಪಕಾಲದ ಅಸೌಖ್ಯದಿಂದ ಅ.3ರಂದು ನಿಧನರಾದರು.
ಧರ್ಮಸ್ಥಳ ಗ್ರಾಮ ಪಂಚಾಯತು ಮಾಜಿ ಸದಸ್ಯರಾಗಿದ್ದ ಇವರು ಧರ್ಮಸ್ಥಳ ಕಲ್ಲೇರಿಯಲ್ಲಿ ಹೋಟೆಲ್ ಉದ್ಯಮಿಯಾಗಿದ್ದರು.
ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಅವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.