


ಬೆಳ್ತಂಗಡಿ: ನ. 5ರಂದು ಬೆಳ್ತಂಗಡಿ ಧರ್ಮಪ್ರಾಂತ್ಯಕ್ಕೆ ನೂತನ ಧರ್ಮಾಧ್ಯಕ್ಷರಾಗಿ ಮಾರ್ ಜೇಮ್ಸ್ ಪಟೇರಿಲ್ ರವರ ಧರ್ಮಾಧ್ಯಕ್ಷ ಪಟ್ಟಾಭಿಷೇಕ ಹಾಗೂ ಅಧಿಕಾರ ಸ್ವೀಕಾರ ಸಮಾರಂಭ ಬಗ್ಗೆ ಪತ್ರಿಕಾಗೋಷ್ಠಿ ನ.3ರಂದು ಬೆಳ್ತಂಗಡಿ ಜ್ಞಾನ ನಿಲಯದಲ್ಲಿ ಜರಗಿತು. ಧರ್ಮಪ್ರಾಂತ್ಯವು ತನ್ನ ಎರಡನೇ ಧರ್ಮಾಧ್ಯಕ್ಷರಾಗಿ ಜೇಮ್ಸ್ ಪಟ್ರೇರಿಲ್ ಅವರನ್ನು ಹರ್ಷಾಭಿಮಾನಗಳೊಂದಿಗೆ ನ. 5ರಂದು ಬರಮಾಡಿಕೊಳ್ಳಲಿದೆ. ಧರ್ಮಾಧ್ಯಕ್ಷ ದೀಕ್ಷೆ ಹಾಗು ಪದಗ್ರಹಣವು ಅದೇ ದಿನ ಸಂತ ಲಾರೆನ್ಸ್ ಕ್ಯಾಥೆಡ್ರಲ್ ಚರ್ಚ್ ನಲ್ಲಿ ನಡೆಯಲಿದೆ.

ಈ ಸಮಾರಂಭದಲ್ಲಿ ಸೀರೋ ಮಲಬಾರ್ ಧರ್ಮಸಭೆಯ ಮಹಾಧರ್ಮಾಧ್ಯಕ್ಷ ರಾಫೇಲ್ ತಟ್ಟಿಲ್, ಡಾ. ಜೋಸೆಫ್ ಪಾಮ್ನಾನಿ, ತಲಶೇರಿ ಆರ್ಚ್‌ಬಿಷಪ್, ಡಾ. ಪೀಟರ್ ಮಚಾದೊ, ಬೆಂಗಳೂರಿನ ಮೆಟ್ರೋಪಾಲಿಟನ್ ಆರ್ಚ್ ಬಿಷಪ್, ಮಾರ್ ಅಂಡ್ರಸ್ ತಾಯತ್ತು, ಕ್ಯಾಥೋಲಿಕ್ ಬಿಷಪ್ಸ್ ಕಾನ್ಸರೆನ್ಸ್ ಆಫ್ ಇಂಡಿಯಾ (CBCI) ಅಧ್ಯಕ್ಷರು, ರೆವ್. Msgr. ಅಂಡ್ರಿಯಾ ಫ್ರಾನ್ಸಿಯಾ, ಅಪೋಸ್ಟೋಲಿಕ್ ನುನ್ಸಿಯೊ ಅವರ ಉಪ ಮುಖ್ಯಸ್ಥರು, ಮತ್ತು ರೆವ್. ಫಾ. ಮ್ಯಾಥ್ಯ ವಟ್ಟಮಟ್ಟಮ್ CMF, ಕಾರೆಟಿಯನ್ಸ್‌ನ ಸುಪೀರಿಯರ್ ಜನರಲ್, ರೋಮ್, ಹಾಗೂ ಭಾರತದಾದ್ಯಂತದ ಹಲವಾರು ಆರ್ಚ್ ಬಿಷಪ್‌ಗಳು ಮತ್ತು 44 ಬಿಷಪ್‌ಗಳು ಭಾಗವಹಿಸಲಿದ್ದಾರೆ.


250ಧರ್ಮಗುರುಗಳು, 300ಧರ್ಮ ಭಗೀಣಿಯರು, ಹಾಗೂ 4000ಕ್ಕು ಅಧಿಕ ಭಕ್ತಾದಿಗಳು ಭಾಗವಹಿಸುವರು ಎಂದು ಮಾಧ್ಯಮ ಪ್ರತಿನಿಧಿ ಫಾ. ಸುನಿಲ್ ತಿಳಿಸಿದರು. ಧರ್ಮಾಧ್ಯಕ್ಷ ದೀಕ್ಷೆಯು ಒಂದು ಪವಿತ್ರ ಧಾರ್ಮಿಕ ಆಚರಣೆಯಾಗಿದ್ದು ನಂತರ ಹೊಸ ಧರ್ಮಾಧ್ಯಕ್ಕರಾಗಿ ಸ್ಥಾನಾರೋಹಿತರಾಗುವ ಜೇಮ್ಸ್ ಪಟ್ಟೇರಿಲ್ ಮತ್ತು ನಿವೃತ್ತಿಗೊಳ್ಳುತಿರುವ ಲಾರೆನ್ಸ್ ಮುಕ್ಕುಯಿಯವರಿಗೂ ಶುಭಕೋರಲು ಒಂದು ಸಾರ್ವಜನಿಕ ಸಮ್ಮೇಳನವು ಹಮ್ಮಿಕ್ಕೊಳ್ಳಲಾಗಿದೆ. ಲಾರೆನ್ಸ್ ಮುಕ್ಕುಯಿಯವರು ಕಳೆದ 26 ವರ್ಷಗಳಿಂದ ಧರ್ಮಪ್ರಾಂತ್ಯವನ್ನು ಮುನ್ನಡೆಸುತ್ತಿದ್ದು ಅವರು ಈಗ ನಿವೃತ್ತಿಗೊಳ್ಳುತ್ತಿದ್ದಾರೆ. ಕಳೆದ 26ವರ್ಷಗಳಲ್ಲಿ ಲಾರೆನ್ಸ್ ರವರ ಮುಖಾಂತರ ಈ ಬೆಳ್ತಂಗಡಿ ಧರ್ಮಪ್ರಾಂತ್ಯಕ್ಕೆ, ಈ ನಾಡಿನ ಜನತೆಗೆ ನೀಡಿದ ಎಲ್ಲ ಅನುಗ್ರಹಗಳಿಗೆ ಧರ್ಮಪ್ರಾಂತ್ಯವು ಚಿರಋಣಿಯಾಗಿದೆ. ಸಮಾಜದ ಸರ್ವತೋಮುಖ ಬೆಳವಣಿಗೆಗೆ ಲಾರೆನ್ಸ್ ಮುಕ್ಕುಯಿಯವರ ಕೊಡುಗೆ ಅಪಾರವಾದುದ್ದು. ಅದರಲ್ಲೂ ಪ್ರಧಾನವಾಗಿ ಶಿಕ್ಷಣ, ಅರೋಗ್ಯ ಮತ್ತು ಸಮುದಾಯ ಅಭಿವೃದ್ಧಿಗಾಗಿ ಧಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆಗಳಲ್ಲಿ ಮಾಡಿದ ಕೊಡುಗೆ ಅದ್ವಿತೀಯ.

ನಿವೃತ್ತರಾಗುವ ಲಾರೆನ್ಸ್ ಮುಕ್ಕುಯಿಯವರು ಬೆಳ್ತಂಗಡಿ ಲಾಯಿಲದಲ್ಲಿರುವ ವಿಯಾನ್ನಿ ಸದನದಲ್ಲಿ ನಿವೃತ್ತಿ ಜೀವನವನ್ನು ಕಳೆಯಲಿದ್ದಾರೆ. ವಿಕಾರ್ ವಾರ್ ವಂ. ಫಾ. ವಲಿಯ ಪರಂಭಿಲ್, ಜೈಸನ್ ಪಟ್ಟೇರಿಲ್, ಐವನ್ ಒಲಿಕಾಟುಕುಳಿ, ಆಲ್ವಿನ್ ಮೊದಲಾದವರು ಉಪಸ್ಥಿತರಿದ್ದರು.









