ಪೆರಾಡಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಪೆರಾಡಿ ಇದರ 2023-24ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ವಠಾರದಲ್ಲಿ ಸೆ.15ರಂದು ನಡೆಯಿತು. ಸಂಘದ ಅಧ್ಯಕ್ಷ ಸತೀಶ್ ಕೆ.ಕಾಶಿಪಟ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘ ಒಟ್ಟು 3182 ಸದಸ್ಯರನ್ನು ಹೊಂದಿದ್ದು 86,26,91,191/- ದುಡಿಯುವ ಬಂಡವಾಳ ಹೊಂದಿದೆ. ಈ ಸಾಲಿನಲ್ಲಿ ಒಟ್ಟು ರೂ. 54 ಕೋಟಿ ಠೇವಣಿ ಸಂಗ್ರಹಗೊಂಡು ರೂ. 358 ಕೋಟಿ ವಾರ್ಷಿಕ ವ್ಯವಹಾರ ನಡೆಸಿ 99 ಲಕ್ಷ ರೂ ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ ಶೇ 21 ಡಿವಿಡೆಂಡ್ ನೀಡಲಾಗುವುದು ಎಂದರು.
ಸಂಘದಲ್ಲಿ ಕಳೆದ 39 ಸುದೀರ್ಘ ಸೇವೆ ನೀಡಿ ಡಿಸೇಂಬರ್ ತಿಂಗಳಲ್ಲಿ ನಿವೃತ್ತಿ ಹೊಂದಲಿರುವ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯು. ಶೇಖ್ ಲತೀಫ್ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಉಪಾಧ್ಯಕ್ಷೆ ದೇವಕಿ ಶೆಟ್ಟಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಕ್ ಲತೀಫ್, ನಿರ್ದೇಶಕರಾದ ಎನ್. ಸೀತಾರಾಮ ರೈ, ಪ್ರವೀಣ್ ಗಿಲ್ಬರ್ಟ್ ಪಿಂಟೊ, ಪುತ್ತು ನಾಯ್ಕ, ಹರಿಪ್ರಸಾದ್ ಪಿ. ಧರ್ಣಪ್ಪ ಪೂಜಾರಿ, ಸುಜಾತ, ಶ್ರೀಪತಿ ಉಪಾಧ್ಯಾಯ, ರಾಜೇಶ್ ಶೆಟ್ಟಿ, ಕೃಷ್ಣಪ್ಪ, ಡಿ.ಸಿ.ಸಿ. ಬ್ಯಾಂಕ್ ಪ್ರತಿನಿಧಿ ಸುದರ್ಶನ್ ಉಪಸ್ಥಿತರಿದ್ದರು.
ಸಿಬ್ಬಂದಿಗಳಾದ ಹೇಮಾ, ರೋಹಿಣಿ, ವೀರೇಂದ್ರ ಕುಮಾರ್, ಮಮತಾ, ಲಕ್ಷ್ಮಣ, ಕವಿತಾ, ರಮ್ಯಾ, ನಳಿನಿ, ಸುಜಿತ್ ಕುಮಾರ್, ಮನೋಜ್ ಕುಮಾರ್, ಹರ್ಷಲಾ ವಿ. ಜೈನ್ ಸಹಕರಿಸಿದರು. ಮಹಾ ಸಭೆಯಲ್ಲಿ ಮಾಜಿ ಅಧ್ಯಕ್ಷ ಪಿ.ಕೆ. ರಾಜು ಪೂಜಾರಿ, ಮಾಜಿ ಬಾ.ಜ.ಪ. ತಾಲೂಕ್ ಅಧ್ಯಕ್ಷ ಜಯಂತ್ ಕೋಟ್ಯಾನ್ ಮರೋಡಿ, ಮರೋಡಿ ಗ್ರಾಮ ಪಂಚಾಯತ್ ಅಧ್ಯಕ್ಷ ರತ್ನಕರ್ ಬುಣ್ಣನ್, ಉಪಾಧ್ಯಕ್ಷ ಶುಭಕರ ಹೆಗ್ಡೆ, ನಿವೃತ್ತ ಅಭಿವೃದ್ಧಿ ಅಧಿಕಾರಿ ವಾಸುದೇವ ನಾಯಕ್, ನಾರಾವಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಜಯ ಕುಮಾರ್ ಬಂಗ, ಕಾಶಿಪಟ್ಣ ಗ್ರಾ.ಪಂ. ಮಾಜಿ ಅಧ್ಯಕ್ಷೆ ಶಿಲ್ಪಾ, ಸಂಘದ ಮಾಜಿ ಅಧ್ಯಕ್ಷರುಗಳು, ನಿರ್ದೇಶಕರು, ಸದಸ್ಯರುಗಳು, ಮರೋಡಿ, ಕಾಶಿಪಟ್ಣ, ಹೊಸಂಗಡಿ ಗ್ರಾಮ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.
5 ಗ್ರಾಮಗಳ ವ್ಯಾಪ್ತಿಯಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿ ಯು ಸಿಯಲ್ಲಿ ಹೆಚ್ಚು ಅಂಕ ಗಳಿಸಿ ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಗೌರವಿಸಲಾಯಿತು. ಶೇ 100ಫಲಿತಾಂಶ ದಾಖಲಿಸಿದ ಶಾಲೆಗಳಿಗೆ ಗೌರವ ಸಲ್ಲಿಸಲಾಹಿತು. 5 ಗ್ರಾಮಗಳ ಪ್ರಗತಿಪರ ಕೃಷಿಕರಿಗೆ, ಸಂಘದ ಸದಸ್ಯರು ಮೃತ ಪಟ್ಟ ಕುಟುಂಬಕ್ಕೆ ಆರ್ಥಿಕ ನೆರವು ಮತ್ತು 128ವಿಕಲ ಚೇತನರಿಗೆ ಆರ್ಥಿಕ ನೆರವು ನೀಡಲಾಯಿತು.
ನಿರ್ದೇಶಕ ಹರಿಪ್ರಸಾದ್ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯು. ಶೇಕ್ ಲತೀಫ್ ವರದಿ ಮಂಡಿಸಿದರು. ನಿರ್ದೇಶಕ ಎನ್ ಆರ್ ಸೀತಾರಾಮ ರೈ ವಂದಿಸಿದರು. ಕಾಶಿಪಟ್ಣ ಪ್ರೌಢ ಶಾಲಾ ಶಿಕ್ಷಕ ದೇವದಾಸ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.