ಬೆಳಾಲು: ಬೆಳಾಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2023-24ನೇ ಸಾಲಿನ ವಾರ್ಷಿಕ ಮಹಾಸಭೆ ಸೆ.15ರಂದು ಬೆಳಾಲು ಶ್ರೀ ಧ.ಮ. ಪ್ರೌಢ ಶಾಲಾ ವಠಾರದಲ್ಲಿ ಸಂಘದ ಅಧ್ಯಕ್ಷ ಹೆಚ್. ಪದ್ಮ ಗೌಡರ ಅಧ್ಯಕ್ಷತೆಯಲ್ಲಿ ಜರಗಿತು.
ಆರ್ಥಿಕ ವರ್ಷದಲ್ಲಿ ಸಂಘ ರೂ. 1,04,18,813/ ನಿವ್ವಳ ಲಾಭ ಗಳಿಸಿ ಶೇ. 13.50 ಡಿವಿಡೆಂಡ್ ಘೋಷಣೆ ಮಾಡಲಾಯಿತು.ಉಪಾಧ್ಯಕ್ಷ ಸುರೇಂದ್ರ ಗೌಡ, ನಿರ್ದೇಶಕರುಗಳಾದ ದಿನೇಶ ಎ., ವಿಜಯ ಗೌಡ, ದಾಮೋದರ ಗೌಡ, ರಾಜಪ್ಪ ಗೌಡ, ಸುಲೈಮಾನ್, ರಮೇಶ್ ಗೌಡ, ಎಲ್ಯಣ್ಣ ನಾಯ್ಕ, ಮಾನಿಗ, ಸೀತಮ್ಮ ಕೆ. ಎಂ., ಸುಜಾತ ಉಪಸ್ಥಿತರಿದ್ದರು.
ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ನಾರಾಯಣ ಗೌಡ ವರದಿ ವಾಚಿಸಿದರು. ಸಿಬ್ಬಂದಿಗಳು ಸಹಕರಿಸಿದರು. ಸಭೆಯಲ್ಲಿ ಸಹಕಾರ ನಿಯಮ ಪ್ರಕಾರ ಬೈಲಾ ತಿದ್ದುಪಡಿಯ ಕುರಿತು ಚರ್ಚಿಸಿ ಮಂಜೂರು ಮಾಡಲಾಯಿತು.ರೈತರ ಕ್ಷೇಮ ನಿಧಿಯಿಂದ ಅಪಘಾತಕ್ಕೆ ಒಳಗಾದ ಸದಸ್ಯರಿಗೆ ಸಹಾಯಧನ ವಿತರಣೆ ಮಾಡಲಾಯಿತು.
ಶ್ರೀ ಧ. ಮ. ಪ್ರೌಢ ಶಾಲಾ ನಿವೃತ್ತ ಮುಖ್ಯ ಶಿಕ್ಷಕ ರಾಮಕೃಷ್ಣ ಭಟ್ ಚೊಕ್ಕಾಡಿಯರರನ್ನು ಸನ್ಮಾನ ಮಾಡಲಾಯಿತು. ಉಜಿರೆ ಶ್ರೀ ಧ. ಮ. ಕಾಲೇಜು ಉಪನ್ಯಾಸಕ ದಿವಾ ಕೊಕ್ಕಡ ಸನ್ಮಾನಿತರಿಗೆ ಅಭಿನಂದನಾ ಭಾಷಣ ಗೈದರು. ಶಿಕ್ಷಕ ಮಹೇಶ್ ಪುಳಿತ್ತಡಿ ನಿರೂಪಿಸಿದರು. ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು