ಉಜಿರೆ: ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬೆಳ್ತಂಗಡಿ ಮತ್ತು ಅನುಗ್ರಹ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಉಜಿರೆ ಇವುಗಳ ಸಹಭಾಗಿತ್ವದಲ್ಲಿ ನಡೆದ ಕೊಕ್ಕಡ ವಲಯ ಮಟ್ಟದ ಪ್ರತಿಭಾ ಕಾರಂಜಿ 2024-25 ಸ್ಪರ್ಧೆಯಲ್ಲಿ ಇಲ್ಲಿನ ಶ್ರೀ ಧ. ಮಂ. ಆಂಗ್ಲ ಮಾಧ್ಯಮ (ರಾಜ್ಯ ಪಠ್ಯಕ್ರಮ) ಶಾಲೆಯು ಹನ್ನೊಂದು ಬಹುಮಾನಗಳನ್ನು ಗೆದ್ದುಕೊಂಡಿದೆ.
ಮೂರು ಪ್ರಥಮ ಬಹುಮಾನ, ಐದು ದ್ವಿತೀಯ ಹಾಗೂ ಮೂರು ತೃತೀಯ ಬಹುಮಾನಗಳು ಲಭಿಸಿವೆ.
ಆಲಾಪ್ ಎಂ. (ಇಂಗ್ಲಿಷ್ ಭಾಷಣ), ಅಕ್ಷಯ್ ಕೃಷ್ಣ (ರಂಗೋಲಿ) ಹಾಗೂ ಕವನ, ಶ್ರೇಯ, ಸ್ವೀಕೃತಿ, ಹರಿಣಿ, ಸುಧನ್ವ ಮತ್ತು ಸಚಿತ್ ಭಟ್ (ಕವಾಲಿ -ಸಮೂಹ) ಪ್ರಥಮ ಬಹುಮಾನ ಗೆದ್ದಿದ್ದಾರೆ.
ದೀಪಿಕಾ ಡಿ.ಕೆ. (ಸಂಸ್ಕೃತ ಭಾಷಣ), ಫಾಯಿಝ (ಧಾರ್ಮಿಕ ಪಠಣ -ಅರೇಬಿಕ್), ತೌಫೀರ (ಚಿತ್ರಕಲೆ), ಬಿ. ತಸ್ಮಯ್ (ಕವನ ವಾಚನ) ಹಾಗೂ ಸೃಜನ್ (ಗಝಲ್) ದ್ವಿತೀಯ ಸ್ಥಾನ ಗಳಿಸಿದ್ದಾರೆ.
ವಿಜಯ್ ಕುಮಾರ್ (ಮಿಮಿಕ್ರಿ), ಆಧ್ಯ ರಾವ್ (ಭರತನಾಟ್ಯ) ಹಾಗೂ ನಿರೀಕ್ಷಾ, ಅನ್ವಿತಾ, ನಿಶ್ಮಿತ, ದೀಕ್ಷಾ, ಚಿನ್ಮಿತ ಸನ್ನಿಧಿ, ಚಿಂತನ್ ಮತ್ತು ನಿಹಾಲ್ (ಜನಪದ ನೃತ್ಯ -ಸಮೂಹ) ತೃತೀಯ ಬಹುಮಾನ ಪಡೆದಿದ್ದಾರೆ.