

ಶಿಬರಾಜೆ: ಗ್ರಾಮಾಭ್ಯದಯ ಕಾರ್ಯಕ್ರಮ ಅನುಷ್ಠಾನ ಸಮಿತಿ ಇದರ ನೇತೃತ್ವದಲ್ಲಿ ಶ್ರೀ ದುರ್ಗಾ ಪರಮೇಶ್ವರಿ ಭಜನಾ ಮಂಡಳಿ ಇವರ ಸಹಕಾರದೊಂದಿಗೆ ನಡೆಯುವ 23ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಠಮಿ ಆಚರಣೆಯ ಆಟೋಟ ಸ್ಪರ್ಧೆಗಳನ್ನು ಊರಿನ ಹಿರಿಯ ವ್ಯಾಪಾರಸ್ಥ ಸಂಜೀವ ನಾಯ್ಕ್ ರವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಅಧ್ಯಕ್ಷ ಪಿಟಿ ಸೆಬಾಸ್ಟಿನ್, ಗೌರವಧ್ಯಕ್ಷ ನಿತ್ಯಾನಂದ ರೈ, ಕಾರ್ಯದರ್ಶಿ ರಾಜೇಶ್ ಶೆಟ್ಟಿ, ಕೋಶಾಧಕಾರಿ ವಿದ್ಯೇoದ್ರ ಗೌಡ, ಜೆಸಿಐ ಅಧ್ಯಕ್ಷ ಸಂತೋಷ್ ಜೈನ್ ವಲಂಬಳ, ಕಾರ್ಯದರ್ಶಿ ಅಕ್ಷತ್ ರೈ, ಕಳೆoಜ ಸದಾಶಿವೇಶ್ವರ ದೇವಳದ ಅಧ್ಯಕ್ಷ ಶ್ರೀಧರ್ ರಾವ್ ಭಜನಾ ಮಂಡಳಿ ಅಧ್ಯಕ್ಷ ಹರೀಶ್ ಗೌಡ ಕುಕ್ಕಾಜೆ, ಗ್ರಾಮ ಅರಣ್ಯ ಸಮಿತಿಯ ಅಧ್ಯಕ್ಷ ಧನಂಜಯ ಗೌಡ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಊರ ಪರವೂರ ಗ್ರಾಮಸ್ಥರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿದ್ದು ಮದ್ಯಾಹ್ನ ಸಾವಜನಿಕರಿಗೆ ಅನ್ನಸಂತರ್ಪಣೆ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.